ಪ್ರಾರಂಭ ಪದದ ಹುಡುಕು
ಇಂತಿಂತೆ ಪೇೞ್ವೊಡೆಲ್ಲಮ ನಂತಾತ್ಮಕಮಕ್ಕುಮಾ ವಿರುದ್ಧದ ಭೇದಂ ಸಂತಯಿಸಿ ಬಲಿದು ಮನಮನ ದಂತಱೆಸಲೆ ಪೇೞಲಾರ್ಪೆನೆಂಬವನೊಳನೇ (ಗೀತಿಕೆ)
ಇಂತಿದು ದಕ್ಷಿಣ ಮಾರ್ಗದ ಕಾಂತಮಸಂಭಾವಿತಾರ್ಥಮುದ್ದಾಮೋಕ್ತಂ ಸಂತತಮುತ್ತರ ಮಾರ್ಗಗ ತಾಂತರಮದನಿಂತು ಕುಱುತು ತಱೆಸಲ್ಗೆ ಬುಧರ್
ಇಂತಿದು ಸಮಬಂಧ ದ್ವಿತ ಯಾಂತರಮಾ ವಿಷಮಬಂಧಮಿನ್ನಿಂತಕ್ಕುಂ ಚಿಂತೈಕಸುಖಾಕ್ರಾಂತರ್ ಸಂತುಷ್ಟೈಕಾಗ್ರಚಿತ್ತರಾದರ್ ತಮ್ಮೊಳ್
ಇಂತಿರೆ ಮಾರ್ಗದ್ವಿತಯುಗ ತಾಂತರಮಂ ಪೇೞ್ದೆನೆಲ್ಲಿಯುಂ ಕ್ಷೀರಗುಡಾ ದ್ಯಂತರರಸಾಂತರಂ ಜಾ ತ್ಯಂತರಮಪ್ಪಂತನಂತಮಂತರ್ಭೇದಂ (ಗೀತಿಕೆ)
ಇಂತು ಪಮಾಕ್ರಮಮನಪ ಯಂತಂ ಗುಣಗಣಮನಱಿದು ಪೇೞ್ಗೆ ಕವೀಶರ್ ಸಂತತಮಿಂತಕ್ಕು ಕಾಂ ತಾಂತಿಕಮತಿಶಯದ ಲಕ್ಷ್ಯಲಕ್ಷಣಯುಗದಿಂ
ಇಂತು ಪೇಳ್ದೊಡಿದು ಗೌರವದೋಷದ ಮಾೞ್ಕಿನಿ ಶ್ಚಿಂತಮೀ ತೆಱದವಂ ಕಳೆಗಾ ಕೃತಿಯತ್ತಣಿಂ ಮುಂತೆ ಪೇೞ್ವಿ ಕುಱೆಪಂ ಕುಱೆಗೊಂಡು ಕವೀಶರಾ ರ್ಪಂತು ಪಿಂಗಿಸುಗೆ ಕಾವ್ಯದಿನಾ ಲಘುದೋಷಮಂ
ಇಂತು ಮಿಕ್ಕ ವರ್ಣನೆಗಳ್ ಸಂತತಮೊದಾಗಿ ಪೇೞ್ದ ಕಾವ್ಯಂ ಧರೆಯೊಳ್ ಸಂತತಿ ಕೆಡದೆ ನಿಲ್ಕುಮಾಕ ಲ್ಪಾಂತಂಬರಮಮೋಘವರ್ಷಯ ಶಂಬೋಲ್
ಇಂತು ವಿಶೇಷ್ಯಂ ಕ್ರಿಯೆಯಂ ಸಂತಂ ನೋೞ್ಪುದಱೆುನಕ್ಕುಮದು ಸಾಪೇಕ್ಷಂ ಚಿಂತಿಸೆ ಸಮಾಸಮಂ ಪೇ ೞ್ಪಂತಪ್ಪ ಪದಂ ಸಮರ್ಥಮಲ್ತಪ್ಪುದಱೆಂ
ಇಂತುಕಾರಕಂಗಳೊಳ್ ಸಂತಮಱೆಯೆ ಪೇೞ್ದ ಗುಣಮಂ ದೋಷಮುಮಂ ಚಿಂತಿಸಿ ಪೆಱವುಮಿನ್ನಪ್ಪುವಂ ಭ್ರಾಂತಿಲ್ಲದಱೆದುಕೊಳ್ಗೆ ಕವಿಗಳ್ ಕೃತಿಗಳೊಳ್ (ವೃತ್ತ)
ಇಂತುದಿತ ಭೇದಮಂ ದೃ ಷ್ಟಾಂತಾಳಂಕಾರಮಾರ್ಗಮಂ ಕನ್ನಡದೊಳ್ ಸಂತತಗುಣಮಂ ಕೈಕೊ ಳ್ವಂತಾಗಿರೆ ಬಗೆದು ಪೇೞ್ಗೆಪರಮ ಕವೀಶರ್
ಇಂದಿದನುಪ್ರಾಸಂ ಪಾ ದಾಂತದೊಳೊಂದಾವುದಾನುಮಿಟ್ಟಕ್ಕರಮಂ ಮುಂತಣ ಪಾದಾಂತಂಗಳೊ ಳುಂ ತಡೆಯದೆ ಪೇೞ್ದೊಡಂತದಂತ ಪ್ರಾಸಂ
ಇಂದುಕಿರಣಂಗಳಿಂದಂ ಚಂದನರಸದಿಂದೆ ಮಾಗಿಯಾ ನೀರಿಂದಂ ನಂದದು ಪರಿತಾಪಾನಳ ನಿಂದಱಿದೆಂ ನಿನ್ನ ಮೆಯ್ಯ ಕಾಮಜ್ವರಮಂ
ಇಂನಂತೆ ಮತ್ತೆ ಬೞಿ ಮಿಗೆ ಮುಂ ನಿಲೆ ತಾಂ ಮೇಣ್ ಪೆಱ೦ ಗಡಂ ಗಳಮಾದಂ ಕೆಂನಂ ನಿಲ್ಲೆಂದಿವನೆಂ ದುಂ ನಿಱೆಸಲ್ಕಲ್ಲದೆಡೆಗಳೊಳ್ ಕಲ್ಲದಿರಿಂ
ಇದಱ ವಿಪರ್ಯಯ ವಿವಿಧಾ ಸ್ಪದಾಕ್ಷರ ವಿಕಲ್ಪಮಿಂತಿದುತ್ತರ ಮಾರ್ಗಂ ತ್ರಿದಶಾಧೀಶ್ವರಭೂತ್ಯ ತ್ಯುದಾರ ವಿವಿಧಾರ್ಥವಿಭವನೀ ಭೂಪೇಂದ್ರಂ
ಇದು ದಕ್ಷಿಣಮಾರ್ಗವಿಭೇ ದದ ಮಧುರರಸಪ್ರಯೋಗಮಾಚಾರ್ಯಮನೋ ಮುದಿತವಿತಾನಂ ವಿದಿತಾ ಸ್ವದಮುತ್ತರಮಾರ್ಗವರ್ಗಮಧುರಾಳಾಪಂ