ಪ್ರಾರಂಭ ಪದದ ಹುಡುಕು
ಆ ಕಪಿಲ ಸುಗತ ಕಣಚರ ಲೋಕಾಯತಿಕಾದಿ ಮಾರ್ಗಭೇದಂ ಸಮಯಂ ಪ್ರಾಕಟಮದಂ ವಿರುದ್ಧ ವಿ ವೇಕದಿನಱೆ ಪುವೊಡೆ ನಾಡೆ ಸಮಯವಿರುದ್ಧಂ
ಆಗಮ ಸಮಯ ನ್ಯಾಯವಿ ಭಾಗ ಕಳಾ ಕಾಲ ಲೋಕ ದೇಶ ವಿರುದ್ಧಂ ಭೋಗಿವಿಷಂಬೋಲ್ ಪ್ರಾಣ ತ್ಯಾಗಮನಾಗಿಸುಗುಮಮಳಕೃತಿವಧುಗಿನಿತುಂ
ಆಗಳುಂ ಗುರುಗಳಲ್ಲದ ತಾಣದೊಳಂ ಗುರೂ ದ್ಯೋಗದಿಂ ಬಗೆಗೆ ಗೌರವ ದೋಷಮಿದೆಂಬುದಂ ಬೇಗಮಾ ಲಘುಗಳಲ್ಲದ ತಾಣದೊಳಂ ಲಘೂ ಪಾಗಮ ಕ್ರಮದೆ ನಂಬುಗೆ ಲಾಘವ ದೋಷಮಂ
ಆದಿಪ್ರತೀತಿಯಿಂಶ ಬ್ದಾದರದಿಂ ಸದೃಶಮಾದ ವಸ್ತುದ್ವಯದೊಳ್ ಭೇದಮನಱಿ ಪುವುದುಚಿತ ಗು ಣೋದಯ ಕೃತವಾಕ್ಯವಿಸ್ತರಂ ವ್ಯತಿರೇಕಂ
ಆದಿಸ್ವರಪದಮಂತದೊ ಳಾದೆಡೆಯೊಳ್ ದೀರ್ಘಮಕ್ಕುಮೆರಡನೆಯ ವಿಭ ಕ್ತ್ಯಾದಾನಪದಂ ದೀರ್ಘಂ ಪಾದಂತದೊಳುೞಿದ ತಾಣದೊಳ್ ಸ್ವಚ್ಛಂದಂ
ಆಮೀಳನಮಂ ಕಣ್ಗಳೊ ಳಾ ಮನದೊಳಗೊಸಗೆಯಂ ಶರೀರದೊಳೆತ್ತಂ ರೋಮಾಂಚಕಂಚುವಂ ಮದಿ ರಾಮದವಾಗಿಸೆ ತೆಗೞ್ಪನಾಕೆಯ ನುಡಿಯೊಳ್ ಗುಣಸ್ವಭಾವಾಖ್ಯಾನಂ
ಆಯುಂ ಶ್ರೀಯುಂ ವಿಜಯಮು ಮಾಯತಿಯುಂ ನೃಪತಿ ನಿನಗೆ ನಿಜಸಂತತಿಯುಂ ನ್ಯಾಯದೆ ಪೆರ್ಚುವುದಕ್ಕೀ ತೋಯಧಿಧರಣೀಧರಾಧರಸ್ಥಿತಿವರೆಗಂ
ಆರುಮೀ ಗುರುಲಘೂದಿತದೋಷ ವಿಶೇಷಮಂ ಧೀರಸತ್ವರಱೆದುಂ ಕುಱೆಗೊಂಡು ವಿಭಾಗಿಸರ್ ಕಾರಣಾಂತರಮನಂತದಱೊಳ್ ತಱೆಸಂದು ನಿ ರ್ಧಾರಿತ ಕ್ರಮದೆ ಪೇೞ್ವಿನುದಾಹರಣಂಗಳಂ
ಆರೆಮುಚ್ಚಿ ಕಣ್ಗಲಮ ವನ ಕರಿ ಮೆಲ್ಲದೆ ಲಲಿತ ಸಲ್ಲಕೀಪಲ್ಲವಮಂ ಸ್ಮರವಶದಿಂದಿರ್ದುದು ನಿಜ ಕರೇಣುಪೇಚಕನಿರೂಪಿತಾಯತಹಸ್ತಂ ಕ್ರಿಯಾಸ್ವಭಾವಾಖ್ಯಾನಂ
ಆವುದು ಬಾಗಿದುದುಮಧಿಕಂ ಬಸನಂ ಕೇವಳಮಾಗೆ ನೆಗೆವುದು ಚಿತಾವಯವಂ ದೀವದಿಂ ನಿಂದು ಸಿತಗನಂ ನುಡಿವುದು ಭಾವಿಸಿ ಬಗೆಗೊಳ್ವೊಡಾರಕೊರ್ನದಿಯಂ (ಒರ್ನುಡಿ)
ಆಶಾವಳಯಿತಲೋಕಾ ಕಾಶಮಿದೇನತಿವಿಶಾಲಮೋ ನಿನ್ನ ಯಶೋ ರಾಶಿಯನಿಂದುದ್ಯುತಿಯ ನಿ ಕಾಶಮನೊಳಕೊಳ್ಗುಮಳವಿಗೞಿ ದಿರ್ದುದುಮಂ