ಪ್ರಾರಂಭ ಪದದ ಹುಡುಕು

(55) (11) (21) (2) (7) (0) (0) (0) (6) (0) (0) (6) (0) (0) ಅಂ (5) ಅಃ (0) (44) (0) (12) (2) (0) (3) (1) (14) (0) (0) (0) (0) (0) (0) (0) (23) (0) (21) (4) (57) (63) (0) (20) (6) (39) (2) (4) (0) (3) (35) (14) (0) (49) (2) (0)
ನೆಗೞ್ದರ್ದ ಕನ್ನಡಂಗಳೊ ಳಗಣಿತ ಗುಣ ವಿದಿತ ಸಂಸ್ಕೃತತೋಕ್ತಕ್ರಮಮಂ ಬಗೆದೊಂದು ಮಾಡಿ ಪೇೞ್ದೊಡೆ ಸೊಗಯಿಸುಗಂ ಕಾವ್ಯಬಂಧಮೆಂದುಮನಿಂದ್ಯಂ
--------------
ಶ್ರೀವಿಜಯ
ನೆಟ್ಟನೆ ತಾಂ ಸವಿಯೊಳೊಂದಿರೆ ಭೋಜನಮಾ ನಟ್ಟು ಬಡಿಸು ನಾಮಱಿಯದೆನಸುಂ ಸವಿಯಂ ಪುಟ್ಟಿದಾರುಮಱಿಯದದಱ ಪೆಸರೊ ಳಟ್ಟುದಂ ಪೇೞಿ ಕೇಳ್ದೆನೆಂದಱಿಯೆಂ (ಅಸ್ಪಷ್ಟಾಕ್ಷರಂ)
--------------
ಶ್ರೀವಿಜಯ
ನೆನೆದ ಮುಗಿಲ್ಗಳುಂ ಸುರಿವ ಪೆರ್ಮೞೆಯುಂ ಮಿಗೆ ನುಣ್ಣನಪ್ಪ ಕೇ ಕಿಗಳ ಸರಂಗಳುಂ ಪೊಳೆವ ಮಿಂಚುಗಳುಂ ಕರಮುಚ್ಚಮಪ್ಪ ಬೆ ಟ್ಟುಗಳ ತಟಂಗಳಿಂ ಸುರಿದ ನಿರ್ಜ್ಝರಮುಂ ಪೊಸ ಕಾರೊಳಿಂತು ಬೆ ಳ್ಪಗೆ ಪಥಿಕಾಂಗನಾಜನಮನಂಜಿಸುವಂತಿರೆ ತೋಱೆ ಸುತ್ತಲುಂ (ಗೀತಿಕೆ)
--------------
ಶ್ರೀವಿಜಯ
ನೆನೆದಿರುಳುಂ ಪಗಲುಂ ನಿ ನ್ನನೆ ಪೀನಮೊಱಲ್ದು ಮಱುಗಿ ಕಾತರಿಸುತ್ತುಂ ಮನದೊಳ್ ಸೈರಿಸಲಾಱಿ೦ ನಿನಗೆನಸುಂ ಕರುಣಮಿಲ್ಲ ಮರವಾನಿಸನಯ್
--------------
ಶ್ರೀವಿಜಯ
ನೆನೆನೆನೆದು ಪೆಱರ ಮಾತುಗ ಳನೆ ನೆಗೞ್ದಿರೆ ಕೃತಿಯೊಳಿಡುವವಂ ನಗದ ಗುಹಾ ಧ್ವನಿಯವೊಲನರ್ಥವಚನಂ ತನಗಾಗಿಸಲಱೆ ಯನುಚಿತ ವಾಕ್ಚತುರತೆಯಂ
--------------
ಶ್ರೀವಿಜಯ
ನೆರೆದ ವಿಸಂವಾದಂ ಪಂ ಜರಶುಕತತಿಯೊಲ್ ಕುಲಾಲಗೇಹಂಗಳೊಳಂ ಪರಚಕ್ರಭ್ರಾಂತಿಗಳ ಧ್ವರದೊಳೆ ನೆಗೞ್ಗುಂ ಮಹಾಹವಧ್ವನಿನಿಯತಂ
--------------
ಶ್ರೀವಿಜಯ
ನೆರೆದತಿವಿದಗ್ಧಣಿಕಾ ಸುರತಾಸವಸೇವನಾಕೃತೋದನನಾಗಿ ರ್ದಿರದೆ ತರುಣೀರತಾಂತರ ಸರಾಗಮಂ ಪೇೞ್ವುದಲ್ಲಿ ತುಂಬಿಯ ನೆವದಿಂ
--------------
ಶ್ರೀವಿಜಯ
ನೆರೆದು ಬಂದಪರವರ್ ಸಯಲಾಬಲಮೆಲ್ಲಮೆ ೞ್ತರದೆ ಕೊಂದಪನಿವಂದಿರನೀಗಳೆ ನಿಕ್ಕುವಂ ಪರಿದು ಬೀೞ್ವಿವೊಲಿವಂದಿರ ಪಾಡೞಿ ವಂದಮಂ ತಿರವೇ [ೞೊ] ಡ್ಡೞಿಯದಂತಿರೆ ನಮ್ಮವರೆಲ್ಲರಂ
--------------
ಶ್ರೀವಿಜಯ
ನೆರೆದೂರ್ಧ್ವರೇತನೊಳ್ ಪುರು ಹಿರಣ್ಯರೇತೋತಿತೀವ್ರನೊಳ್ ಮುನಿವರನೊಳ್ ಪರಮಭಗಸಹಿತೆ ಮುದದಿರೆ ಪರಿಶ್ರಮಕ್ಕೆನ್ನ ನಿರ್ವಿಶೇಷನೊಳಾಗಳ್
--------------
ಶ್ರೀವಿಜಯ
ನೆಲಸಿ ಕಿವಿಯೊಳ್ ಮದಾಯತ ವಿಲೋಕದೊಳ್ ಪೊಳೆವುದೊಳ್ಪಿನೆಂದೀ ಕರ್ಣೋ ತ್ಪಲಮುಮನಾಕ್ರಮಿಸುವುದಿಂದು ವಿಲಾಸಿನೀ ನಿನ್ನ ಲೋಲಲೋಚನಯುಗಳಂ
--------------
ಶ್ರೀವಿಜಯ
ನೆಲಸಿದ ಕಾವ್ಯಂ ಕಾವ್ಯ ಕ್ಕೆ ಲಕ್ಷಣಂ ಸತತಮೆಂದೆ ಪೞಗನ್ನಡಮಂ ಪೊಲಗೆಡಿಸಿ ನುಡಿವರಾಗಮ ಬಲಹೀನರ್ ದೇಸಿಯಲ್ಲದೆಂದಱೆದಿರ್ದುಂ
--------------
ಶ್ರೀವಿಜಯ
ನೋಡುವೆನಾ ಮಹೀಪತಿಯ ನರ್ಥಿಗಣಾರ್ಥಿತ ಕಲ್ಪವೃಕ್ಷನಂ ಬೇಡುವೆನರ್ಥ ಸಂಚಯಮನೆಂಬುದಿದುತ್ತರ ಮಾರ್ಗವಾಚಕಂ ನೀಡುಮುದಾತ್ತಚಾರುಗುಣನಂ ಮನದೊಳ್ ನೆಱೆನೋೞ್ಪಿನೞ್ತಿಯೊಳ್ ಕೂಡಿರವೇೞ್ಪುನೆಂಬುದಿದು ದಕ್ಷಿಣಮಾರ್ಗವಿಚಕ್ಷಣೋದಿತಂ
--------------
ಶ್ರೀವಿಜಯ