ಒಟ್ಟು 30 ಕಡೆಗಳಲ್ಲಿ , 1 ಕವಿಗಳು , 27 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧಿಕೃತ ಸತ್ಪುರುಷಾರ್ಥ ಪ್ರಧಾನ ಧರ್ಮಾರ್ಥಕಾಮಮೋಕ್ಷಂಗಳವಾ ಬುಧಜನ ವಿವಿಕ್ತ ಕಾವ್ಯ ಪ್ರಧಾರಿತಾರ್ಥಂಗಳಖಿಳ ಭುವನಹಿತಂಗಳ್
--------------
ಶ್ರೀವಿಜಯ
ಅರಿನೃಪಬಲಮಂ ಗೆಲ್ದುರು ಪರಾಕ್ರಮಕ್ರಮದೆ ಶೌರ್ಯಮಂ ಪ್ರಕಟಿಸು ನೀಂ ನರಮಹಿತಾ ನಿನಗೇನಹಿ ತರುಮೊಳರೇ ಸತತ ಪರಹಿತಾಚಾರಪರಾ
--------------
ಶ್ರೀವಿಜಯ
ಈ ಕುಱೆ ಪುಗಳಿಂದಱೆ ವುದ ನೇಕ ಸಮಾಹಿತ ಪದ ಪ್ರಯೋಗಾಂತರಮಂ ಲೋಕಪ್ರತೀತ ಸುಭಗ ವಿ ವೇಕಾಳಾಪಂ ಪ್ರಸನ್ನಮದುಮಿಂತಕ್ಕುಂ
--------------
ಶ್ರೀವಿಜಯ
ಒಂದಱ ಮಾತುಗಳಂ ಪೆಱ ತೊಂದಱೊಳಱೆದಿಟ್ಟು ಕೊಡೆ ಪೇೞ್ದೊಡದಕ್ಕುಂ ಸುಂದರತರಂ ಸಮಾಹಿತ ಮೆಂದುಂ ಮತ್ತದಱ ಲಕ್ಷ್ಯಮೀ ತೆಱನಕ್ಕುಂ
--------------
ಶ್ರೀವಿಜಯ
ಗುಣದೋಷಾದಿಗಳಿಂದನು ಗುಣಮಾಗಿರೆ ಪೇೞ್ದು ತದನುಸದೃಶದಿನೊಂದಂ ಪ್ರಣಿಹಿತ ನಿದರ್ಶನಕ್ರಮ ದೆಣಿಸುವುದಕ್ಕುಂ ನಿದರ್ಶನಾಲಂಕಾರಂ
--------------
ಶ್ರೀವಿಜಯ
ನಯವಿನಿಮಯ ನಾನಾ ಮಂತ್ರ ದೂತ ಪ್ರಯಾಣಾ ಕ್ಷಣ ಸಮಯ ವಿಳಾಸೋಲ್ಲಾಸಿ ಸಂಗ್ರಾಮಿ ಕಾಂಗಂ ಭಯವಿರಹಿತ ವೀರ್ಯೌದಾರ್ಯ ಗಂಭೀರ ಕಾರ್ಯಾ ಶ್ರಯ ವಿಶದಗುಣಶ್ರೀನಾಯಕೋತ್ಕರ್ಷವೇದ್ಯಂ
--------------
ಶ್ರೀವಿಜಯ
ನಿರವದ್ಯಾನ್ವಯ ಮುದ್ಘಮುದ್ಧತವ ಹಾಕ್ಷೀ ರಾಬ್ಧಿಡಿಂಡೀರ ಪಾಂ ಡುರಮಾಕ್ರಾಂತ ಸುಶೈಲ ಸಾಗರಧರಾಶಾಚಕ್ರವಾಳಾಂಬರಂ ಪರಮ ಶ್ರೀವಿಜಯ ಪ್ರಭೂತಿಜ ಯಶಂಸ್ತ್ರೀಬಾಲವೃದ್ಧಾಹಿತಂ ಪರಮಾನಂದಿತಲೋಕಮೊಪ್ಪೆ ನೆಲೆಗೊಳ್ಗಾಚಂದ್ರತಾರಂಬರಂ
--------------
ಶ್ರೀವಿಜಯ
ನೆರೆದೂರ್ಧ್ವರೇತನೊಳ್ ಪುರು ಹಿರಣ್ಯರೇತೋತಿತೀವ್ರನೊಳ್ ಮುನಿವರನೊಳ್ ಪರಮಭಗಸಹಿತೆ ಮುದದಿರೆ ಪರಿಶ್ರಮಕ್ಕೆನ್ನ ನಿರ್ವಿಶೇಷನೊಳಾಗಳ್
--------------
ಶ್ರೀವಿಜಯ
ಪರವಸದ ಬಗೆಯೊಳೊಂದಂ ದೊರೆಕೊಳಿಸುವುದೞಿಗತರ್ಕಿತೋಪಸ್ಥಾನಂ ನಿರುತಂ ಸಮಾಹಿತಾಳಂ ಕರಣಾಂತರಮಕ್ಕುಮಿಂತು ತದುದಾಹರಣಂ
--------------
ಶ್ರೀವಿಜಯ
ಪಾಪಮಿದು ಪುಣ್ಯಮಿದು ಹಿತ ರೂಪಮಿದಹಿತಪ್ರಕಾರಮಿದು ಸುಖಮಿದು ದುಃ ಖೋಪಾತ್ತಮಿದೆಂದಱೆಪುಗು ಮಾ ಪರಮ ಕವಿಪ್ರಧಾನರಾ ಕಾವ್ಯಂಗಳ್
--------------
ಶ್ರೀವಿಜಯ
ಮಿಗೆ ದುಷ್ಕರ ಕಾವ್ಯಂಗಳೊ ಳಗರ್ಹಿತಪ್ರಾಯಮಕ್ಕುಮಾಶ್ರುತಿಕಷ್ಟಂ ಪಗರಣದೊಳುಱಿದ ಮೂಱು೦ ನಗಿಸುಗುಮಪ್ಪುದಱಿನಲ್ಲಿಗಂತವದೋಷಂ
--------------
ಶ್ರೀವಿಜಯ
ಮಿಗೆ ಪದ್ಯದೊಳಂ ಗುಣಮಂ ತಗುಳ್ಚುಗುಂ ಸಮಹಿತ ಪ್ರಯೋಗಾನುಗತಂ ಸೊಗಯಿಸುವಂತಿರೆ ಬಗೆದಿದ ನಗಾಧಮನರಿಡುಗೆ ಕೃತಿಯೊಳೋಜೋಗುಣಮಂ
--------------
ಶ್ರೀವಿಜಯ
ಮಿಗೆ ಪೞಿವರೆನ್ನನೆನ್ನದೆ ಪೊಗೞ್ವರ್ ನೆರೆದೆಲ್ಲರೆನ್ನನೆನ್ನದೆ ತನ್ನೊಳ್ ಬಗೆದುಭಯಲೋಕಹಿತದೊಳ್ ನೆಗೞಿ ಜನಂ ಪೞಿಗೆ ಪೊಗೞ್ಗಿ ತನಗೇನದಱೊಳ್
--------------
ಶ್ರೀವಿಜಯ
ಯತಿಭಂಗಮರ್ಥಶೂನ್ಯಂ ಸತತ ವಿರುದ್ಧಾರ್ಥಮುಕ್ತಪುನರುಕ್ತಾರ್ಥಂ ಚ್ಯುತಯಾಥಾಸಂಖ್ಯಂ ವ್ಯವ ಹಿತಮಚ್ಛಂದಂ ವಿಸಂಧಿಕಂ ನೇಯಾರ್ಥಂ
--------------
ಶ್ರೀವಿಜಯ
ರಾಗಾದಿ ದೋಷವಿರಹಿತ ವಾಗತಿಶಯವಖಿಳವಸ್ತು ವಿಸ್ತರ ವಿಷಯಂ ಯೋಗಿಗುಣಾನುಗತಂ ಮ ತ್ತಾಗಮವೇತದ್ವಿರುದ್ಧ ವಚನಂ ದೋಷಂ
--------------
ಶ್ರೀವಿಜಯ