ಒಟ್ಟು 13 ಕಡೆಗಳಲ್ಲಿ , 1 ಕವಿಗಳು , 13 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಱ ವಿಪರ್ಯಯ ವಿವಿಧಾ ಸ್ಪದಾಕ್ಷರ ವಿಕಲ್ಪಮಿಂತಿದುತ್ತರ ಮಾರ್ಗಂ ತ್ರಿದಶಾಧೀಶ್ವರಭೂತ್ಯ ತ್ಯುದಾರ ವಿವಿಧಾರ್ಥವಿಭವನೀ ಭೂಪೇಂದ್ರಂ
--------------
ಶ್ರೀವಿಜಯ
ಇದು ದಲ್ ವರ್ಗಪ್ರಾಸ ಕ್ಕುದಾಹೃತಂ ಕುರಿತು ಶಷಸ ವರ್ಣತ್ರಯಮುಂ ವಿದಿತ ಪ್ರಾಸವಿವಿಕ್ತಾ ಸ್ಪದದೊಳ್ ನಿಲೆ ಪೇೞ್ದೊಡದು ಸಮೀಪ ಪ್ರಾಸಂ
--------------
ಶ್ರೀವಿಜಯ
ಇದು ನಿಬಿಡ ಶಿಥಿಲಬಂಧಾ ಸ್ಪದ ಮಾರ್ಗದ್ವಿತಯಗದಿತ ಲಕ್ಷ್ಯವಿಭಾಗಂ ಸದಭಿಕಮನೀಯಗುಣಮ ಪ್ಪುದು ನಿಯತಂ ಕಾಂತಮೆಂಬುದಭಿಗೀತಾರ್ಥಂ
--------------
ಶ್ರೀವಿಜಯ
ಉದಯಾರೂಢಂ ಕಾಂತ್ಯಾ ಸ್ಪದನನುರಕ್ತಾತ್ಮಮಂಡಳಂಕುಮುದಕರಂ ಮೃದುತರಕರಂಗಳಿಂದತಿ ಮುದಮಂ ಲೋಕಕ್ಕೆ ಪಡೆಗುಮಿಂತೀ ರಾಜಂ
--------------
ಶ್ರೀವಿಜಯ
ತ್ರಿದಶಸುರಲೋಕವಾಸಾ ಸ್ಪದಮಂ ಪೆಱುಗುಂ ಮನುಷ್ಯ ಮನುಜಂ ನಿನ್ನಾ ಪದಚರಣ ಯುಗದ್ವಯಮಂ ಮುದದೞ್ತಿಯೆ ಬಗೆದು ನೆನೆವನನುದಿನಮೆಂದುಂ
--------------
ಶ್ರೀವಿಜಯ
ಪದಪದಾ ವಿಯುತ ನಿಯಮಾ ಸ್ಪದಮಲ್ಲದಳಂಕೃತಂ ಕ್ರಿಯಾಕಾರಕದೊಳ್ ಪುದಿದರ್ಥವ್ಯಕ್ತಿಯನೀ ವುದುಗದ್ಯಮನೇಕ ರೂಪಭೇದ ವಿವಿಕ್ತಂ
--------------
ಶ್ರೀವಿಜಯ
ಮೃದುತರ ವರ್ಣಾನುಗಮಾ ಸ್ಪದ ವಿರಚನೆಯೊಳಗೆ ತೋರ್ಪುದದು ಮೃದುಬಂಧಂ ವಿದಿತ ಸ್ಫುಟಾಕ್ಷರಾಧಿಕ ಪದವಿರಚಿತಮಪ್ಪುದಕ್ಕುಮಾ ಸ್ಫುಟಬಂಧಂ
--------------
ಶ್ರೀವಿಜಯ
ಮೊದಲೊಳ್ ಸಮಾಸಪದಮುಮ ನೊದವಿಸಿ ಪೇೞ್ದದಱ ತುದಿಯೊಳಸಮಾಸ ಪದಾ ಸ್ಪದಮಾಗಿ ನಿಱೆಸೆ ಕರ್ವ್ವಿನ ತುದಿಯಂತಿರೆ ವಿರಸಮಕ್ಕುಮದು ತೊದಳುಂಟೇ
--------------
ಶ್ರೀವಿಜಯ
ಯತಿಯೆಂಬುದುಸಿರ್ವ ತಾಣಂ ಕೃತಾಸ್ಪದಂ ವೃತ್ತಾಜಾತಿ ಪದ ಪದ್ಧತಿಯೊಳ್ ಸತತಂ ಛಂದೋವಿದಿತ ಪ್ರತೀತಶಾಸ್ತ್ರೋಕ್ತಮಾರ್ಗದಿಂದಱಿ ವುದದಂ
--------------
ಶ್ರೀವಿಜಯ
ವದನಾಂಬುಜರಂಗದೊಳೀ ಮದಾಲಸಭ್ರೂಲತಾವಿಲಾಸಿನಿ ಲೀಲಾ ಸ್ಪದ ನೃತ್ಯಮನಾಗಿಸಿದ ಪ್ಪುದಿದೆಂಬುದು ರೂಪಕೋರುರೂಪಕಮಕ್ಕುಂ ರೂಪಕ ರೂಪಕಂ
--------------
ಶ್ರೀವಿಜಯ
ವಿದಿತಾರ್ಥವಿಪರ್ಯಾಸಾ ಸ್ಪದಮೆ ದಲಾಕ್ಷೇಪಮೆಂಬಳಂಕಾರಂ ಮ ತ್ತದಱ ವಿಶೇಷ ವಿಭಾಗಮ ನುದಾಹರಣ ಮಾರ್ಗದಿಂ ಪ್ರಯೋಗಿಸಿ ತೋರ್ಪೆಂ
--------------
ಶ್ರೀವಿಜಯ
ವಿದಿತಾರ್ಥಾಲಂಕಾರಾ ಸ್ಪದ ಭೇದಂಗಳ್ ಪುರಾನ ಶಾಸ್ತ್ರೋಕ್ತಮಗಳ್ ತದನುಮತಲಕ್ಷ್ಯಲಕ್ಷಣ ನಿದರ್ಸನಂಗಳನನುಕ್ತಮೋಕ್ತಿಯೆ ಪೇೞ್ವೆಂ
--------------
ಶ್ರೀವಿಜಯ
ಶ್ರೀ ವಿದಿತಾರ್ಥಾಲಂಕಾ ರಾವಳಿಯಂ ವಿವಿಧಭೇದ ವಿಭವಾಸ್ಪದಮಂ ಭಾವಿಸಿ ಬೆಸಸಿದನಖಿಳ ಧ ರಾವಲ್ಲಭನಿಂತಮೋಘವರ್ಷ ನೃಪೇಂದ್ರಂ
--------------
ಶ್ರೀವಿಜಯ