ಒಟ್ಟು 11 ಕಡೆಗಳಲ್ಲಿ , 1 ಕವಿಗಳು , 11 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಪಮನಂ ಬರಿಪ್ಪೆನನುರಾಗದೆ ನಲ್ಲನನಿಂದು ಮಿಕ್ಕ ನಂ ದನವನದಲ್ಲಿಗಲ್ಲಿಗೆ ತರಿಪ್ಪೆನನಂಗ ಸುಖೋಚಿತಂಗಳಾ ನನುನಯದಿಂದಿರಿಪ್ಪೆನಿನಿತುಂ ಸುರತಾಸವಸೇವನಾ ಸನಾ ತನಸುಖದಿಂದಿರಿಪ್ಪೆನನುರಾಗದಿನೆಂಬುದಿದುತ್ತರೋತ್ತರಂ
--------------
ಶ್ರೀವಿಜಯ
ಅರಿಗೆ ದುರಾಹವರಂಗಾಂ ತರದೊಳಭೀತಂ ನಿಜಾರಿಸಮಿತಿಗಳಿಂದಂ ನೆರೆದ ಜಯಂಗೊಂಡಾಗಡೆ ಸುರಾಂಗನಾಸುರತವಿಷಯಸುಖಮಂ ಕೊಟ್ಟಂ
--------------
ಶ್ರೀವಿಜಯ
ಕೆಳದಿಯನಭಿಮತಮುಮನೊ ರ್ಬುಳಿಗೂಡೆ ವಿದಗ್ಧೆ ಸುರತಸೇವನಮಂ ಮೊ ಕ್ಕಳಮವರ್ಗೆ ಮಾಡಲೆಂದಾ ಗಳೆ ಪೋಗಲ್ ಬಗೆದು ನುಡಿದಳಿಂತೀ ಮಾತಂ
--------------
ಶ್ರೀವಿಜಯ
ದೊರೆಕೊಂಡಿರೆ ಸೊಗಯಿಸುಗುಂ ಪುರಾಣ ಕಾವ್ಯ ಪ್ರಯೋಗದೊಳ್ ತತ್ಕಾಲಂ ವಿರಸಮ ಕರಮವು ದೇಸಿಗೆ ಜರದ್ವಧೂವಿಷಯ ಸುರತ ರಸರಸಿಕತೆವೋಲ್
--------------
ಶ್ರೀವಿಜಯ
ನೆರೆದತಿವಿದಗ್ಧಣಿಕಾ ಸುರತಾಸವಸೇವನಾಕೃತೋದನನಾಗಿ ರ್ದಿರದೆ ತರುಣೀರತಾಂತರ ಸರಾಗಮಂ ಪೇೞ್ವುದಲ್ಲಿ ತುಂಬಿಯ ನೆವದಿಂ
--------------
ಶ್ರೀವಿಜಯ
ಪರಪುರುಷ ಸೇವನಾಕೃತ ಸುರತವಿಕಾರಂಗಳೆಲ್ಲಮಂ ನಿಜಪತಿಯೊಳ್ ನೆರೆದಾಗಳೆ ಮಱಿಯಲ್ಬಗೆ ದಿರವದು ನಗಿಸಿತ್ತು ಪೀನಮಭಿಸಾರಿಕೆಯಾ ಹಾಸ್ಯ
--------------
ಶ್ರೀವಿಜಯ
ಪರಿದೆಯ್ದಿ ತಾಗಿದಂ ಬಾ ಸುರತರ ರಘುಕುಲಲಲಾಮ ಲಕ್ಷ್ಮೀಧರನೊಳ್ ಪರಿಕೋಪವಿಧೃತ ವಿಸ್ಫುರ ದುರುರಕ್ತ ಕಠೋರ ನಯನಯುತ ದಶವದನಂ
--------------
ಶ್ರೀವಿಜಯ
ಪರಿದೆಯ್ದಿ ತಾಗಿದಂ ಭಾ ಸುರತರ ರಘುಕುಲಲಲಾಮನೊಳ್ ಲಕ್ಷ್ಮಣನೊಳ್ ಪರಿಕೋಪವಶಭ್ರಮಣೋ ದ್ಧುರ ರಕ್ತಕಠೋರಲೋಚನಂ ದಶವದನಂ
--------------
ಶ್ರೀವಿಜಯ
ಪುರುಷೋತ್ತಮರಾರ್ ನಿನ್ನ ನ್ನರುದಾ [ರರ] ರಾತಿಸಮಿತಿಯಂ ಕೊಂದಿರ್ದುಂ ಸುರಸುಂದರಿ ಲೀಲಾಲಸ ಪರಿರಂಭಾರಂಭ ಸುರತ ಸುಖದೊಳ್ ನಿಱೆಪರ್
--------------
ಶ್ರೀವಿಜಯ
ಬರಿಪೆನಮೋಘಮಿಂದು ಪವನಾಂತರದಲ್ಲಿಗೆ ನಲ್ಲನಂ ತಗು ಳ್ದಿರಿಪೆನನಾರತಂ ಸುರತರಾಗನಿರೂಪಣ ಕಾರಣಂಗಳಂ ತರಿಪೆನನಾಕುಳಂ ಮನದಲಂಪಿನೊಳಾ ಮದನೋಪಮಾನನೊಳ್ ನೆರೆವೆನಭಂಗದೆಂಬ ವಚನಂಗಳಿವುತ್ತರಮಾರ್ಗವರ್ತಿಗಳ್
--------------
ಶ್ರೀವಿಜಯ
ವಿರಹಂ ಪರಿತಾಪಮನಾ ಪರಿತಾಪಮುಮಳಿಪನಳಿಪು ಮಾವಲ್ಲಭನೊಳ್ ನೆರೆದಿರ್ಪ ಬಗೆಯನಾ ನೆರೆ ದಿರವುಂ ಸುರತಾನುರಾಗಮಂ ಪೆರ್ಚಿಸುಗುಂ
--------------
ಶ್ರೀವಿಜಯ