ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಳವಿಮೋಹದಿನೀ ನಿ ನ್ನ ಮೊಗಕ್ಕೆ ಱಗುವುದು ತೊಱಿವುದಾ ಸರಸಿಜಮಂ ಭ್ರಮರಂ ವದನಮಿದಲ್ತೆಂ ದು ಮೋಹದಿಂದೆಂಬುದಿದುವೆ ಮೋಹೋಪಮಿತಂ ಮೋಹೋಪಮೆ
--------------
ಶ್ರೀವಿಜಯ
ನಡುವಗಲ ಬಿಸಿಲ್ ತನ್ನಂ ಸುಡೆ ವನಕರಿ ಕಮಳಬಂಧುವೊಳ್ ದಿನಕರನೊಳ್ ಕಡುಗಾಯ್ಪೆನೆ ಸರಸಿಜಮಂ ಕಿಡಿಸಲ್ ತಾಂ ಪೊಕ್ಕುದಾಗ ಬಗೆದಾಕೊಳನಂ
--------------
ಶ್ರೀವಿಜಯ
ನರಪತಿತನಯನನಾಯತ ತರಳಾಪಾಂಗದೊಳೆ ನೋಡಿ ಕೆಳದಿಯರೊಡನಾಂ ಪರಿಗತ ಹಾಸ್ಯದೊಳಿರ್ದೆಂ ಗುರುಲಜ್ಜಾಭರದಿನೆಱಗಿ ಮುಖಸರಸಿಜಮಂ
--------------
ಶ್ರೀವಿಜಯ