ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸುಕುಮಾರನನಾಯತ ತರ ಕಡೆಗಣ್ಣಿಂದ ನೋಡಿ ಕೆಳದಿಸಮೇತಂ ಪರಿಗತನಗೆಯಿಂದಿರ್ದೆಂ ಗುರುನಾಣ್ಭರದಿಂದಮೆಱಗಿ ಮುಖತಾವರೆಯಂ
--------------
ಶ್ರೀವಿಜಯ
ಪರಿಣಾಮಪಥ್ಯಮಂ ಸುಖ ಪರಿಕರಮಂ ಮೆಚ್ಚದನ್ನರಾರೀ ಮಾತಂ ನಿರತಿಶಯ ರಸಸಮೇತಮ ನರೋಚಕಂ ಮೆಚ್ಚದಂತೆ ಸೊಗಯಿಸುವುಣಿಸಂ
--------------
ಶ್ರೀವಿಜಯ
ವಿಮಳೋದಯ ನಾಗಾರ್ಜುನ ಸಮೇತ ಜಯಬಂಧು ದುರ್ವಿನೀತಾದಿಗಳೀ ಕ್ರಮದೊಳ್ ನೆಗೞ್ಚಿ ಗದ್ಯಾ ಶ್ರಮಪದ ಗುರುತಾ ಪ್ರತೀತಿಯಂ ಕೆಯ್ಕೊಂಡರ್
--------------
ಶ್ರೀವಿಜಯ
ಸಮಱುಸಮಾಸ ಪದಂಗಳ ನಮರ್ದಿರೆ ಸಯ್ತಾಗಿ ಬಗೆದು ಪೇೞ್ದೊಡದಕ್ಕುಂ ಕ್ರಮದೋಜೋಲಕ್ಷಣಮು ತ್ತಮಮಿದು ಗದ್ಯಕ್ಕಲಂಕ್ರಿಯಾನುಸಮೇತಂ
--------------
ಶ್ರೀವಿಜಯ