ಒಟ್ಟು 18 ಕಡೆಗಳಲ್ಲಿ , 1 ಕವಿಗಳು , 18 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನ್ನೆಗಮದಱೊಳಗೆ ಸಮು ತ್ಪನ್ನ ಪ್ರಾಧಾನ್ಯಮನ್ಯಮರ್ಥಾಧಾರಂ ಮುನ್ನಂ ಶಬ್ದಾಳಂಕಾ ರನ್ನಿಶ್ಚಿತಮಕ್ಕೆ ಪೇೞ್ವ ಮಾೞ್ಕಿಯೊಳೆನ್ನಾ
--------------
ಶ್ರೀವಿಜಯ
ಅಮಳಿನ ಗುಣವೃತ್ತಿಗಳಿಂ ಸಮುಪಸ್ಥಿತ ಸಕಳಜನಗತೋಚಿತಗುಣಮಂ ಸಮನಾಗಿಸುವರ್ ಕನ್ನಡಿ ಕಮನೀಯಾಕಾರ ಬಿಂಬಮಂ ತಾಳ್ದುವವೋಲ್
--------------
ಶ್ರೀವಿಜಯ
ಎಂದಿಂತು ಸಮೀಪ ಪ್ರಾ ಸಂ ದರ್ಶಿತ ಭೇದಮಾಯ್ತನುಪ್ರಾಸಮುಮಂ ಸಂಧಿಸಿದೆಣೆಯಕ್ಕರಮೊ ದೊಂದೞೊಳಳವಡಿಸಿ ಬಂದೊಡನುಗತಮಕ್ಕುಂ
--------------
ಶ್ರೀವಿಜಯ
ಕಾರಕದೋಷಮುಂ ವಚನದೋಷಮುಮಾ ಗುರುದೋಷಮುಂ ಲಘೂ ಚ್ಚಾರಿತ ಶಬ್ದದೋಷಮುಮದಂತೆ ಸಮುಚ್ಚಯಜಾತದೋಷಮುಂ ಭೂರಿ ವಿಕಲ್ಪದೋಷಮುಮದಿನ್ನವಧಾರಣದೋಷಮುಂ ವಿಶಂ ಕಾ ರಚಿತೋರು ದೋಷಮುಮನೀ ತೆಱದಿಂ ತೞಿಸಲ್ಗೆ ಪಂಡಿತರ್
--------------
ಶ್ರೀವಿಜಯ
ಕುಱಿತು ಸಮುಚ್ಚಯದಾ ಬೞಿ ವಿಕಲ್ಪದಾ ತೆಱದೊಳೆ ದೋಷಮುಮನಂತೆ ಗುಣಮುಮಂ ಕಿಱೆದಱೊಳಱೆಯೆ ಪೇೞ್ದಿನಿಂತೆ ಪೆಱವುಮನೀ ಕುಱೆಪನೆ ಕುಱೆಮಾಡಿ ಪೇೞ್ಗಿ ಕಬ್ಬಮಂ (ವೃತ್ತ)
--------------
ಶ್ರೀವಿಜಯ
ಜಲದದ ನೆೞಲುಂ ಪರಪುಂ ವಿಲಾಸಮುಂ ಬೆಳಗುವುದಿತ ವಿದ್ಯುಲ್ಲತೆಯುಂ ನೆಲಸವು ಚಲಂಗಳಾದಂ ವಿಲಾಸಿನೀಜನದ ನಲ್ಮೆಯುಂ ಸಂಗಮಮುಂ
--------------
ಶ್ರೀವಿಜಯ
ದೇವರುಂ ಗೊರವರುಂ ಗುಣವೃದ್ಧರನಾರತಂ ಕಾವರಕ್ಕರಸನಂ ಪ್ರಜೆಯಂ ಪರಿವಾರಮಂ ಏವಮಂ ಬಗೆಯದಂತಿರೆ ಪೇೞ್ದ ಸಮುಚ್ಚಯೋ ದ್ಭಾವಕಕ್ರಮವಿಚಾರದೆ ದೋಷಮಿದಗ್ಗಳಂ
--------------
ಶ್ರೀವಿಜಯ
ನೃಪನುಮಂ ಪ್ರಜೆಯುಮಂ ಪರಿವಾರಮುಮಂ ಮಹಾ ಕೃಪೆಯಿನಾ ಗೊರವರುಂ ಸುರರುಂ ಗುಣವೃದ್ಧರುಂ ವಿಪುಳ ರಾಗಪರರಾಗಿಸುಗೆಂದು ಸಮುಚ್ಚಯ ಕ್ಕುಪಚಿತೋರುಗುಣಮಂ ಮಿಗೆ ಪೇೞ್ಗಿ ಕವೀಶ್ವರರ್
--------------
ಶ್ರೀವಿಜಯ
ಪರಿಣತಗುಣರಿರ್ ಕಾಂತೋ ತ್ಕರರಿರ್ ನಿಜಸೌಖ್ಯರಿರ್ ನಿಶಾನಾಯಕನುಂ ನರಪಾ ನೀನುಂ ದೋಷಾ ಕರನಾ ಶಶಿ ನೀನುದಾರಗುಣಸಮುದಯನಯ್
--------------
ಶ್ರೀವಿಜಯ
ಬೆರಸಿರೆ ಮುಂ ಸಮುಚ್ಚಯ ಪದದ್ವಿತಯೋಕ್ತಿ ವಿಭಕ್ತಿ ಕೂಡೆ ಬಂ ದಿರದೆಯುಮೇಕ ವಾಕ್ಯದೊಳೆ ಕಾರಕ ಸಂಪದಮಂ ತಗುಳ್ಚುಗುಂ ನರಪತಿಯುಂ ನೃಪಾಂಗನೆಯರುಂ ನೆರೆದೞ್ತಿಯಿನಾಡಿಪೋದರಾ ಪರಿಜನಮುಂ ಮಹೋತ್ಸವದೊಳೊಂದಿದುದೆಂಬುದಿದಲ್ಪದೂಷಿತಂ
--------------
ಶ್ರೀವಿಜಯ
ಬೇಱೆವೇಱೆರೆ ವಿಕಲ್ಪ ಸಮುಚ್ಚಯಯುಗ್ಮದೊಳ್ ತೋಱುವೆಂ ಕ್ರಮವಿಕಲ್ಪನೆಯಿಂ ಗುಣದೋಷಮಂ ಕೀೞಿಕೊಂಡು ಗುಣಮಂ ಕಳೆಗಲ್ಲಿಯ ದೋಷಮಂ ತೋಱೆ ಪಿಂಗಿಸುವವೊಲ್ ಪೊಸನೆಲ್ಲಿರೆ [ಪೊಳ್ಗ] ಳಂ
--------------
ಶ್ರೀವಿಜಯ
ಲೌಕಿಕ ಸಾಮಯಿಕೋರು ವಿ ವೇಕಮುಮಭ್ಯುದಯ ಪರಮ ನಿಃಶ್ರೇಯಸಮುಂ ಪ್ರಾಕಟಮಕ್ಕುಂ ವಿದಿತಾ ನೇಕ ಕವೀಶ ಪ್ರಯೋಗ ಪದಪದ್ಧತಿಯೊಳ್
--------------
ಶ್ರೀವಿಜಯ
ವಿವಿಧ ವಿಭವ ಶೋಭಾರಂಭ ಲಂಭಪ್ರಲಂಭೋ ದ್ಭವ ವಿಹಿತ ವಿವಾಹೋತ್ಸಾಹ ಸಾಕಲ್ಯ ಕಲ್ಪಂ ಪ್ರವರ ನೃಪಕುಮಾರಾತ್ತೋದಯಾದಿ ಪ್ರಮೋದಾ ಸವಸಮುದಿತ ಸೇವಾರಾತಿ ವೃತ್ತಾಂತ ವೃತ್ತಂ
--------------
ಶ್ರೀವಿಜಯ
ಸಮನಿಸೆ ಸಾಪೇಕ್ಷಮುಮಾ ಸಮಾಸಮುಂ ಪೆಱುಗುಮೆಲ್ಲಿಯಾನುಂ ಗಮಕಂ ಕ್ರಮಮದಱೊಳೆಲ್ಲಮೆನಲಿನಿ ತು ಮಾರ್ಗದೊಳ್ ಸಮಱುಗಿಂತು ಕವಿವೃಷಭರ್ಕಳ್
--------------
ಶ್ರೀವಿಜಯ
ಸಮಱುಗೆಯಿಲ್ಲದ ಮುಱಕಮು ಮಮರ್ದಿರೆ ಕೆಯ್ಗೆಯ್ಯದೊಪ್ಪುವಂದಮುಮವಳಾ ನೆವಮಿಲ್ಲದ ದರಹಸಮುಂ ಸಮದಾಲಸಲಲಿತಗಮನಮುಂ ಸೊಗಯಿಸುಗುಂ
--------------
ಶ್ರೀವಿಜಯ