ಒಟ್ಟು 12 ಕಡೆಗಳಲ್ಲಿ , 1 ಕವಿಗಳು , 11 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತು ವಿಶೇಷ್ಯಂ ಕ್ರಿಯೆಯಂ ಸಂತಂ ನೋೞ್ಪುದಱೆುನಕ್ಕುಮದು ಸಾಪೇಕ್ಷಂ ಚಿಂತಿಸೆ ಸಮಾಸಮಂ ಪೇ ೞ್ಪಂತಪ್ಪ ಪದಂ ಸಮರ್ಥಮಲ್ತಪ್ಪುದಱೆಂ
--------------
ಶ್ರೀವಿಜಯ
ಎಂದಿಂತು ಸಮಾಸೋಕ್ತಿಯೊ ಳೊಂದಾಗಿರೆ ಸಕ್ಕದಂಗಳುಂ ಕನ್ನಡಮುಂ ಸುಂದರಮಕ್ಕುಂ ಕವಿಪದ ವೊಂದಿದವೋಲ್ ಕನಕರಚನೆಯೊಳ್ ಮಣಿನಿಕರಂ
--------------
ಶ್ರೀವಿಜಯ
ಕಾರಕಮಂ ಕ್ರಿಯೆಯುಮನಱೆ ದೋರಂತಿರೆ ಮುಂತಗುಳ್ಚಿ ಮುಕ್ತಕ ಪದದೊಳ್ ಸಾರಂ ಸಮಾಸಪದದು ಚ್ಚಾರಣೆಯಂ ನೀಳ್ದು ನಿಲೆ ತಗುಳ್ಚುಗೆ ಕೃತಿಯೊಳ್
--------------
ಶ್ರೀವಿಜಯ
ತಱಿಸಂದಾ ಸಕ್ಕದಮುಮ ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್ ಕುಱಿತು ಬೆರಸಿದೊಡೆ ವಿರಸಂ ಮಱುಗುವ ಪಾಲ್ಗಳೆಯ ಪನಿಗಳಂ ಬೆರಸಿದವೋಲ್
--------------
ಶ್ರೀವಿಜಯ
ತಱಿಸಂದು ಮನದೊಳೊಂದಂ ಪೆಱತಂ ಮತ್ತದನೆ ಪೋಲ್ವುದಂ ಕುಱಿಪುಗಳಂ ಕುಱಿಮಾಡಿ ಮಾಡಿ ಪೇೞ್ದುದು ನೆಱಿಯೆ ಸಮಾಸೋಕ್ತಿಯೆಂಬುದಿಂತದಱ ತೆಱ೦
--------------
ಶ್ರೀವಿಜಯ
ನಿಕ್ಕುವಮಿಂತುಮಲ್ಲದದ (ಱಾ)ಕ್ರಿಯೆ ಸಾರ್ದಿರೆ ಪತ್ತಿ ಮುಂದೆ ಸ ಯ್ತಕ್ಕುಮನುಕ್ರಮಾನುಗತದಿಂ ಬರಮೀಗೆಮಗೆಂಬ ಕಾರಕಂ ಸಕ್ಕದವೇನೊ ಕಾರಕ ವಿಭಕ್ತಿಯೊಳೊಂದೆ ಸಮಾಸಯುಕ್ತಿ ಲೇ ಸಕ್ಕುಮಭೇದರೂಪಗುಣಮಾಗಿ ತಗುಳ್ದಿರೆ ಮೇಣ್ ಕ್ರಿಯಾಪದಂ
--------------
ಶ್ರೀವಿಜಯ
ಬೆರಸಿರೆ ಸಮಾಸದೊಳ್ ಬಂ ಧುರಮಾಗದು ಕಾವ್ಯಬಂಧಮೆಂದುಂ ಕೃತಿಯೊಳ್ ದೊರೆಕೊಳ್ವ ಪದವಿಶೇಷ್ಯಾಂ ತರಮದಱೆ೦ ವ್ಯಸ್ತಮಾಗಿ ಪೇೞ್ಗಿದನೆಂದುಂ
--------------
ಶ್ರೀವಿಜಯ
ಮೊದಲೊಳ್ ಸಮಾಸಪದಮುಮ ನೊದವಿಸಿ ಪೇೞ್ದದಱ ತುದಿಯೊಳಸಮಾಸ ಪದಾ ಸ್ಪದಮಾಗಿ ನಿಱೆಸೆ ಕರ್ವ್ವಿನ ತುದಿಯಂತಿರೆ ವಿರಸಮಕ್ಕುಮದು ತೊದಳುಂಟೇ
--------------
ಶ್ರೀವಿಜಯ
ಶ್ಲೇಷೋತ್ಪ್ರೇಕ್ಷಾ ಸೂಕ್ಷ್ಮ ವಿ ಶೇಷ ಸಮಾಹಿತ ಸಮಾಸ ಪರ್ಯಾಯೋಕ್ತಾ ನ್ವೇಷ ವಿರೋಧಾಪ್ರಸ್ತುತ ಶೇಷನಿದರ್ಶನ ಸಹೋಕ್ತಿ ಸಂಕೀರ್ಣಂಗಳ್
--------------
ಶ್ರೀವಿಜಯ
ಸಮನಿಸೆ ಸಾಪೇಕ್ಷಮುಮಾ ಸಮಾಸಮುಂ ಪೆಱುಗುಮೆಲ್ಲಿಯಾನುಂ ಗಮಕಂ ಕ್ರಮಮದಱೊಳೆಲ್ಲಮೆನಲಿನಿ ತು ಮಾರ್ಗದೊಳ್ ಸಮಱುಗಿಂತು ಕವಿವೃಷಭರ್ಕಳ್
--------------
ಶ್ರೀವಿಜಯ
ಸಮಱುಸಮಾಸ ಪದಂಗಳ ನಮರ್ದಿರೆ ಸಯ್ತಾಗಿ ಬಗೆದು ಪೇೞ್ದೊಡದಕ್ಕುಂ ಕ್ರಮದೋಜೋಲಕ್ಷಣಮು ತ್ತಮಮಿದು ಗದ್ಯಕ್ಕಲಂಕ್ರಿಯಾನುಸಮೇತಂ
--------------
ಶ್ರೀವಿಜಯ