ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪದಪಾದ ಸಮಸ್ತಾರ್ಧ [ಗತ] ಭೇದ ಚತುಷ್ಟಯಂ ವಿದಿತಾಳಂಕ್ರಿಯಾಧಾರಂ ಮೊದಲ್ ಪೇ[ೞ್ವೊಡೆ] ದುಷ್ಕರಂ ಮುನ್ನಂ ತನ್ನಂ ತಾನೆ ತಾನೇಕೆನ್ನಂ ಕೆನ್ನಂ ನಿರಂತರಂ ಭಿನ್ನಂ ಬಂದಿಪ್ಪನಂತಿನ್ನುಂ ತನ್ನಿಂ ತನಗಮೇವಳೊ
--------------
ಶ್ರೀವಿಜಯ
ಸ್ಮಿತಕುಸುಮಮಧರಪಲ್ಲವ ಮತಿಶಯನಯನಾಳಿ ಬಾಹುಶಾಖಂ ಕಾಂತಾಂ ಲತೆಯೆಂದಿಂತು ಸಮಸ್ತಾ ಶ್ರಿತಂ ಸಮಸ್ತಂ ಸಮಸ್ತರೂಪಕಮಕ್ಕುಂ ಸಮಸ್ತರೂಪಕಂ
--------------
ಶ್ರೀವಿಜಯ