ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತಿಶಯಮಾಗಿರೆ ಗುಣಸಂ ತತಿಯಮ ದೋಷಮನೆ ಪೇೞ್ದವೋಲ್ ಪೇೞ್ದುದು ನಿ ಶ್ಚಿತ ಶಬ್ಧಾರ್ಥಂ ವ್ಯಾಜ, ಸ್ತುತಿಯೆಂಬುದುಮದಱ ಮಾಱ್ಕೆ ಮತ್ತಿಂತಕ್ಕುಂ
--------------
ಶ್ರೀವಿಜಯ
ಅನ್ನೆಗಮದಱೊಳಗೆ ಸಮು ತ್ಪನ್ನ ಪ್ರಾಧಾನ್ಯಮನ್ಯಮರ್ಥಾಧಾರಂ ಮುನ್ನಂ ಶಬ್ದಾಳಂಕಾ ರನ್ನಿಶ್ಚಿತಮಕ್ಕೆ ಪೇೞ್ವ ಮಾೞ್ಕಿಯೊಳೆನ್ನಾ
--------------
ಶ್ರೀವಿಜಯ
ಕೊಡೆ ಪೇೞು ನುತಕಾವ್ಯಮನಿಂತಭಿಮಾನಿ ತಾಂ ನಿರ ಗೀಡಿತ ಮಹಾಪುರುಷವ್ರತನಿಶ್ಚಿತಂ ಕೂಡದಂತೆ ಪೆಱರೊಳ್ ಮೆಚ್ಚಿನೊಳೇತೆಱನಪ್ಪೊಡಂ ನೋಡದಂ ಕುಱಿತಾವನನು ಮೇನುಮಂ
--------------
ಶ್ರೀವಿಜಯ
ಜಿನಚರಣನಖಾದರ್ಶಂ ವಿನತಾಮರರಾಜರಾಜವದನಪ್ರತಿಮಂ ಮನದೊಲ್ ಸಲೆ ನಿಲ್ಕೆಂಬುದು ವಿನಿಶ್ಚಿತ ವಿಶೇಷಣೋರು ರೂಪಕಮಕ್ಕುಂ ವಿಷಮ ರೂಪಕಂ
--------------
ಶ್ರೀವಿಜಯ
ವಿನಿಮೀಳಾದಿಗಳಿವು ಲೋ ಚನಾದಿ ಧರ್ಮಂಗಳಿವನೆ ಕುಮುದಾದಿಗಳೊಳ್ ನೆನೆದಿಂತು ಪೇೞ್ದೊಡಕ್ಕುಂ ವಿನಿಶ್ಚಿತ ಕ್ರಮ ಸಮಾಹಿತಾಲಂಕಾರಂ
--------------
ಶ್ರೀವಿಜಯ