ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಗದ್ಯ) ಇದು ಶ್ರೀ ನೃಪತುಂಗ ದೇವಾನುಮತಮಪ್ಪ ಕವಿರಾಜಮಾರ್ಗದೊಳ್ ಶಬ್ದಾಲಂಕಾರ ವರ್ಣನಾನಿರ್ಣಯಂ ದ್ವಿತೀಯ ಪರಿಚ್ಛೇದಂ
--------------
ಶ್ರೀವಿಜಯ
ನುತ ಶಬ್ದಾಲಂಕಾರದೊ ಳತಿಶಯಮೀ ಕನ್ನಡಕ್ಕೆ ಸತತಂ ಪ್ರಾಸಂ ಕೃತಕೃತ್ಯಮಲ್ಲವಲ್ಲಭ ಮತದಿಂದದ [ಱಾ] ಪ್ರಪಂಚಮೀತೆಱನಕ್ಕುಂ
--------------
ಶ್ರೀವಿಜಯ
ವರ ಶಬ್ದಾಲಂಕಾರದ ವಿರಚನೆಗಳ್ ನೋೞ್ಪೊಡೊಂದೆ ತೋರ್ಕೆಗಳಿಂತುಂ ಪೊರೆದಿರಲೊಂದೊಂದಱೊಳಾ ಪರಮ ಕವೀಶ ಪ್ರಯೋಗಗತಮಾರ್ಗಂಗಳ್
--------------
ಶ್ರೀವಿಜಯ