ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತಿದು ಸಮಬಂಧ ದ್ವಿತ ಯಾಂತರಮಾ ವಿಷಮಬಂಧಮಿನ್ನಿಂತಕ್ಕುಂ ಚಿಂತೈಕಸುಖಾಕ್ರಾಂತರ್ ಸಂತುಷ್ಟೈಕಾಗ್ರಚಿತ್ತರಾದರ್ ತಮ್ಮೊಳ್
--------------
ಶ್ರೀವಿಜಯ
ಜಿನಚರಣನಖಾದರ್ಶಂ ವಿನತಾಮರರಾಜರಾಜವದನಪ್ರತಿಮಂ ಮನದೊಲ್ ಸಲೆ ನಿಲ್ಕೆಂಬುದು ವಿನಿಶ್ಚಿತ ವಿಶೇಷಣೋರು ರೂಪಕಮಕ್ಕುಂ ವಿಷಮ ರೂಪಕಂ
--------------
ಶ್ರೀವಿಜಯ
ಮೃದುತರಕಪೋಲಫಳಕಂ ವದನಾಂಬುಜಮಾಯತೋನ್ನತ ಭ್ರೂಚಾಪಂ ಮುದಮಂ ಪಡೆದತ್ತೆನಗೆಂ ಬುದು ವಿಷಮಿತರೂಪವಿಷಮರೂಪಕಮಕ್ಕುಂ ವಿಷಮ ರೂಪಕಂ
--------------
ಶ್ರೀವಿಜಯ