ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಕಪಿಲ ಸುಗತ ಕಣಚರ ಲೋಕಾಯತಿಕಾದಿ ಮಾರ್ಗಭೇದಂ ಸಮಯಂ ಪ್ರಾಕಟಮದಂ ವಿರುದ್ಧ ವಿ ವೇಕದಿನಱೆ ಪುವೊಡೆ ನಾಡೆ ಸಮಯವಿರುದ್ಧಂ
--------------
ಶ್ರೀವಿಜಯ
ಆಗಮ ಸಮಯ ನ್ಯಾಯವಿ ಭಾಗ ಕಳಾ ಕಾಲ ಲೋಕ ದೇಶ ವಿರುದ್ಧಂ ಭೋಗಿವಿಷಂಬೋಲ್ ಪ್ರಾಣ ತ್ಯಾಗಮನಾಗಿಸುಗುಮಮಳಕೃತಿವಧುಗಿನಿತುಂ
--------------
ಶ್ರೀವಿಜಯ
ಉಕ್ತವಿಚಾರಂ ನ್ಯಾಯನಿ ಯುಕ್ತಂ ಕ್ರಮವಿನ್ನದಕ್ಕೆ ಬಾರದುವೆಲ್ಲಂ ವ್ಯಕ್ತಂ ನ್ಯಾಯವಿರುದ್ಧಂ ಪ್ರೋಕ್ತ ಮಹಾದೋಷಮಂತು ಪೇೞಲ್ಕೆಂತುಂ
--------------
ಶ್ರೀವಿಜಯ
ಕಾಲಮಹೋರಾತ್ರಾದಿಕ ಮಾ ಲಕ್ಷಿತ ಭೇದಮದಱೊಳೊಂದದೊಡಕ್ಕುಂ ಕಾಲವಿರುದ್ಧಂ ದೋಷ ಕ್ಕಾಲಯಮದನಱೆದು ಕೃತಿಯೊಳಿಡದಿರ್ಕೆ ಬುಧರ್
--------------
ಶ್ರೀವಿಜಯ
ದೇಶಂ ವರರಾಷ್ಟ್ರಾದಿ ನಿ ವೇಶಾಂತಂ ತದ್ವಿರುದ್ಧವಚನಂ ಮಿಗೆ ಸಂ ಕ್ಲೇಶಕರಂ ಕೃತಿಕರ್ತೃಗೆ ಕೌಶಲಮಂ ಪಡೆಯದುಕ್ತ ದೇಶವಿರುದ್ಧಂ
--------------
ಶ್ರೀವಿಜಯ
ಲೋಕಮದೂರ್ಧ್ವಾಧೋಮ ಧ್ಯಾಕಾಂಕ್ಷಿತಭೇದರೂಪದಿಂ ಮೂಱಕ್ಕುಂ ಲೋಕವಿರುದ್ಧಂ ತದ್ವ್ಯತಿ ರೇಕೋಕ್ತಿ ವಿವೇಕಿಲೋಕಗರ್ಹಿತ ಮಾರ್ಗಂ
--------------
ಶ್ರೀವಿಜಯ
ಸಕಲವ್ಯಾಪಿ ವಿಶೇಷ ಪ್ರಕಾಶಕಂ ಯುಕ್ತಕಾರಿ ಯುಕ್ತಾಯುಕ್ತಂ ಪ್ರಕಟಶ್ಲೇಷವಿರುದ್ಧಾ ತ್ಮಕಂ ವಿರುದ್ಧಂ ವಿಪರ್ಯಯಂ ಯುಕ್ತಾರ್ಥಂ
--------------
ಶ್ರೀವಿಜಯ