ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಗೀತಿಕೆ) ಅನುಗತಂ ಪೂರ್ವಕವಿಗಳ್ ನೆಎನದಿನ್ನುಂ ಪೇೞ್ದಿಂ ದುಷ್ಕರೋಕ್ತಿಯ – ನ್ನನುಗತಕ್ರಮದೆ ಬಗೆದು ಹೇಳಿಕೆಯೊಳ್ ಜನಿತವಿಭೇದಮುಮಂ ಪೇೞ್ವೆಂ ಕಿಱೆದಂ
--------------
ಶ್ರೀವಿಜಯ
ನಾನಾ ವಸ್ತುವಿಭೇದಮ ನೇನಾನುಂ ತೆಱದೆ ಪೋಲ್ಕೆ ಮಾಡುವುದುಪಮಾ ಮಾನಿತ ಸದಳಂಕಾರಮ ನೂನ ವಿಕಲ್ಪಪ್ರಪಂಚಮೀ ತೆಱನದಱಾ
--------------
ಶ್ರೀವಿಜಯ
ವದನಂ ಮದೀಯಲೋಚನ ಮುದಾವಹಂ ಕಮಳಮಳಿಕುಳೋತ್ಸವಜನಕಂ ವಿದಿತ ವಿಭೇದಕ್ರಮಮಿಂ ತಿದಲ್ಲದಿಲ್ಲೆಂಬುದತಿಶಯೋಪಮೆ ಸತತಂ ಅತಿಶಯೋಪಮೆ
--------------
ಶ್ರೀವಿಜಯ
ವಿನುತ ಪ್ರಾಸಂ ಶಾಂತೋ ಪನತಂ ವರ್ಗೋದಿತಂ ಸಮೀಪಗತಂ ಮ ತ್ತನುಗತಮಂತಗತಂ ಸಂ ಜನಿತ ವಿಭೇದೋಕ್ತಿಯಿಂದಮಿಂತಾಱು ತೆಱ೦
--------------
ಶ್ರೀವಿಜಯ
ಸಮಬಂಧಮೆಂಬುದಕ್ಕುಂ ಸಮನಿಸಿ ಕವಿಗೆಡಱೆ ಬಾರ [ದಂದಂಬಟ್ಟಿಂ] ಸಮೆದ ಪದದಾ ವಿಭೇದ ಕ್ರಮಮೆರಡಕ್ಕುಂ ಮೃದುಸ್ಫುಟೋಕ್ತಿಯಿನದಱೆಂ
--------------
ಶ್ರೀವಿಜಯ