ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವಱ ವಿಪರ್ಯಯವೃತ್ತಿ ಪ್ರವಿಭಕ್ತ ವಿಕಲ್ಪಮಕ್ಕುಮುತ್ತರ ಮಾರ್ಗಂ ಸವಿಶೇಷ ಗುಣಮನತಿಶಯ ಧವಳೋಕ್ತಿಕ್ರಮದಿನಱೆ ಪುವೆಂ ತದ್ಭವದೊಳ್
--------------
ಶ್ರೀವಿಜಯ
ಇದಱ ವಿಪರ್ಯಯ ವಿವಿಧಾ ಸ್ಪದಾಕ್ಷರ ವಿಕಲ್ಪಮಿಂತಿದುತ್ತರ ಮಾರ್ಗಂ ತ್ರಿದಶಾಧೀಶ್ವರಭೂತ್ಯ ತ್ಯುದಾರ ವಿವಿಧಾರ್ಥವಿಭವನೀ ಭೂಪೇಂದ್ರಂ
--------------
ಶ್ರೀವಿಜಯ
ಜಾತಿವಿಭಾಗಮಂ ಬಗೆದು ಪೇೞಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ
--------------
ಶ್ರೀವಿಜಯ
ನಿನ್ನ ಮುಖದಂತೆ ಕಮಳಮಿ ದುನ್ನಿದ್ರಂ ನಿನ್ನ ತಳದವೋಲಾರಕ್ತಂ ನನ್ನಿಯಿನೀ ಪಲ್ಲವಮೆನೆ ಸನ್ನುತರೂಪಿಂ ವಿಪರ್ಯಯೋಪಮಮಕ್ಕುಂ ವಿಪರ್ಯಯೋಪಮೆ
--------------
ಶ್ರೀವಿಜಯ
ಪರಿತಾಪಮನೆನಗೆ ನಿಶಾ ಕರನಾಗಿಸುಗುಂ ವಸಂತಸಮಯಾನುಗತಂ ಸುರಭಿಸಮಯೋದಿತಮ ಹಿಮ ಕರನರಿಲಂ ಪಡೆವನೆಂಬುದಿದು ವಿಪರೀತಂ ವಿಪರೀತಂ : ವಿಪರ್ಯಯಂ
--------------
ಶ್ರೀವಿಜಯ
ಮಿಗೆ ನಿಬಿಡಬಂಧಮೆಂಬುದು ತಗುಳ್ವುವು ವರ್ಣಂಗಳಗಲದಿರೆ ಮತ್ತಕ್ಕುಂ ನೆಗೞ್ದಲ್ಪಪ್ರಾಣಾಕ್ಷರ ನಿಗದಿತಮೇತದ್ವಿಪರ್ಯಯೋಕ್ತಂ ಶಿಥಿಲಂ
--------------
ಶ್ರೀವಿಜಯ
ಸಕಲವ್ಯಾಪಿ ವಿಶೇಷ ಪ್ರಕಾಶಕಂ ಯುಕ್ತಕಾರಿ ಯುಕ್ತಾಯುಕ್ತಂ ಪ್ರಕಟಶ್ಲೇಷವಿರುದ್ಧಾ ತ್ಮಕಂ ವಿರುದ್ಧಂ ವಿಪರ್ಯಯಂ ಯುಕ್ತಾರ್ಥಂ
--------------
ಶ್ರೀವಿಜಯ