ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತಿವಿಶದ ಯಶೋವೃತ್ತಂ ನತಸಕಳಾರಾತಿಜನವಿತಾನಂ ಮತ್ತಂ ವಿತತ ಶ್ರೀಸಂಪತ್ತಂ ಶತಮಖ ಸದೃಶಾನುಭಾವನೊಲವಿಂ ಪೆತ್ತಂ
--------------
ಶ್ರೀವಿಜಯ
ತಾಳತರುವಿತತಿಯೊಳ್ ಬೇ ತಾಳಂಗಳ್ ಮೊಱಿದು ತೆಱಿದು ಬಾಯ್ಗಳನಾ ಪಾ ತಾಳಬಿಲಂಗಳವೋಲ್ ತಳ ತಾಲಲಯಕ್ರಮದೆ ಕುಣಿಯೆ ಭಯಮಯನಾದೆಂ ಭಯಾನಕ
--------------
ಶ್ರೀವಿಜಯ
ಪ್ರತಿವಸ್ತೂಪಮಿತಾಲಂ ಕೃತಮಿಂತಕ್ಕುಂ ಧರಾಧಿಪಾ ನಿನ್ನನ್ನಂ ವಿತತಯಶನಿಲಯ ತಾರಾ ಪತಿ ದಿನಕರ ಸದೃಶತೇಜನೆಂಬುದುಮುಂಟೇ ಪ್ರತಿವಸ್ತೂಪಮೆ
--------------
ಶ್ರೀವಿಜಯ
ಹರಿಣಧರಮ ಸೊಗಯಿಸಿದಂ ತಿರೆ ಕುಸುಮಿತಚೂತವಿತತಿ ಸೊಗಯಿಸಿತೆನಸುಂ ಸುರಭಿಸುಮನಸ್ವಿ ದೋಷಾ ಕರವಿಲಸಿತಮಪ್ಪೊಡಿಂತು ಯುಕ್ತಾಯುಕ್ತಂ ಯುಕ್ತಾ ಯುಕ್ತಂ
--------------
ಶ್ರೀವಿಜಯ