ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತಿಶಯಿತ ವಸ್ತುವಿಷಯ ಪ್ರತೀತಿಯಂ ಮಱಸಿ ನಿಱಸಿ ಪೇೞ್ವುದು ಪೆಱತಂ ಸತತಮಪಹ್ನುತಿ ಸದಳಂ ಕೃತಿ ಮತ್ತಿಂತಕ್ಕುಮದಱ ಲಕ್ಷ್ಯವಿಕಲ್ಪಂ
--------------
ಶ್ರೀವಿಜಯ
ಅರೂಢನಿಜಮನೋಹಂ ಕಾರೋತ್ಕರ್ಷಪ್ರಕಾಶಮೂರ್ಜಿತ ಸದಳಂ ಕಾರಂ ತದೀಯ ವಸ್ತುವಿ ಚಾರಮನಿ ತೆಱದಿನಱಿದುಕೊಳ್ಗೆ ಕವೀಶರ್
--------------
ಶ್ರೀವಿಜಯ
ನಾನಾ ವಸ್ತುವಿಭೇದಮ ನೇನಾನುಂ ತೆಱದೆ ಪೋಲ್ಕೆ ಮಾಡುವುದುಪಮಾ ಮಾನಿತ ಸದಳಂಕಾರಮ ನೂನ ವಿಕಲ್ಪಪ್ರಪಂಚಮೀ ತೆಱನದಱಾ
--------------
ಶ್ರೀವಿಜಯ
ಪರಮ ಶ್ರೀ ವಿಜಯಕವೀ ಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ ನಿರತಿಶಯ ವಸ್ತುವಿಸ್ತರ ವಿರಚನೆ ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ
--------------
ಶ್ರೀವಿಜಯ
ಸಕಳಕಳಾ ಭಾಷಾ ಲೌ ಕಿಕ ಸಾಮಯಿಕಾದಿ ವರ್ಣನಾನಿರ್ಣಿಕ್ತ ಪ್ರಕಟತರ ವಸ್ತುವಿಸ್ತರ ವಿಕಲ್ಪವಿದನಲ್ಲದಾಗದಾಗದು ಪೇೞಲ್
--------------
ಶ್ರೀವಿಜಯ