ಒಟ್ಟು 20 ಕಡೆಗಳಲ್ಲಿ , 1 ಕವಿಗಳು , 15 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅೞಿಪಿದವರುಂ ವಿಭೀತರು ಮೞಲ್ದರುಂ ಸಲೆ ವಿಯೋಗದಿಂ ನಿಜ ಜನದಿಂ ಕೞಿಯೆ ಪರಾರ್ಥಿಗಳುಂ ಬಾ ಯೞಿದೊಳ್ದಿಂತಿದನೆ ಯುಕ್ತಪುನರುಕ್ತಿಕಮಂ
--------------
ಶ್ರೀವಿಜಯ
ಆಗಳುಂ ಗುರುಗಳಲ್ಲದ ತಾಣದೊಳಂ ಗುರೂ ದ್ಯೋಗದಿಂ ಬಗೆಗೆ ಗೌರವ ದೋಷಮಿದೆಂಬುದಂ ಬೇಗಮಾ ಲಘುಗಳಲ್ಲದ ತಾಣದೊಳಂ ಲಘೂ ಪಾಗಮ ಕ್ರಮದೆ ನಂಬುಗೆ ಲಾಘವ ದೋಷಮಂ
--------------
ಶ್ರೀವಿಜಯ
ಇಂದಿದನುಪ್ರಾಸಂ ಪಾ ದಾಂತದೊಳೊಂದಾವುದಾನುಮಿಟ್ಟಕ್ಕರಮಂ ಮುಂತಣ ಪಾದಾಂತಂಗಳೊ ಳುಂ ತಡೆಯದೆ ಪೇೞ್ದೊಡಂತದಂತ ಪ್ರಾಸಂ
--------------
ಶ್ರೀವಿಜಯ
ಎಂದಿಂತು ಸಮಾಸೋಕ್ತಿಯೊ ಳೊಂದಾಗಿರೆ ಸಕ್ಕದಂಗಳುಂ ಕನ್ನಡಮುಂ ಸುಂದರಮಕ್ಕುಂ ಕವಿಪದ ವೊಂದಿದವೋಲ್ ಕನಕರಚನೆಯೊಳ್ ಮಣಿನಿಕರಂ
--------------
ಶ್ರೀವಿಜಯ
ಎಂಬುದು ವಿನುತ ಪ್ರಾಸಂ ಸಂಬಂಧಾಕ್ಷರದೊಳೆಲ್ಲ ಮಾತ್ರೆಗಳುಂ ತ ಳ್ತಿಂಬಾಗಿ ಬೆರಸಿ ಶೋಭಾ ಡಂಬರಮಂ ಪಡೆಗುಮುಚಿತ ಕಾವ್ಯೋಕ್ತಿಗಳೊಳ್
--------------
ಶ್ರೀವಿಜಯ
ಜನಜನಮುಮೆಲ್ಲಮೋದಂ ತಡೆಯದೆ ಕಲ್ಗುಂ ಗುರೂಪದೇಶಕ್ರಮದಿಂ ನುಡವಲ್ಮೆಯಲ್ತದೇಂ ಕ ಲ್ತೊಡನೋದುವುವಲ್ತೆ ಗಿಳಿಗಳು ಪುರುಳಿಗಳುಂ
--------------
ಶ್ರೀವಿಜಯ
ತೊಳಪೆಳವೆಱಿಯಂ ಮೊರೆವಳಿ ಕುಳಂಗಳುಂ ಮೆಲ್ಲನೆಸಪ ಮಳಯಾನಿಳನುಂ ಮುಳಿಸಂ ಕೞಲ್ಚಿ ಕಳೆದುವು ಕಳಿಕಾಂಕುರ ಚೂತತತಿಗಳುಂ ಕಾಮಿಗಳಾ
--------------
ಶ್ರೀವಿಜಯ
ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನೆನೆದ ಮುಗಿಲ್ಗಳುಂ ಸುರಿವ ಪೆರ್ಮೞೆಯುಂ ಮಿಗೆ ನುಣ್ಣನಪ್ಪ ಕೇ ಕಿಗಳ ಸರಂಗಳುಂ ಪೊಳೆವ ಮಿಂಚುಗಳುಂ ಕರಮುಚ್ಚಮಪ್ಪ ಬೆ ಟ್ಟುಗಳ ತಟಂಗಳಿಂ ಸುರಿದ ನಿರ್ಜ್ಝರಮುಂ ಪೊಸ ಕಾರೊಳಿಂತು ಬೆ ಳ್ಪಗೆ ಪಥಿಕಾಂಗನಾಜನಮನಂಜಿಸುವಂತಿರೆ ತೋಱೆ ಸುತ್ತಲುಂ (ಗೀತಿಕೆ)
--------------
ಶ್ರೀವಿಜಯ
ನೆನೆದಿರುಳುಂ ಪಗಲುಂ ನಿ ನ್ನನೆ ಪೀನಮೊಱಲ್ದು ಮಱುಗಿ ಕಾತರಿಸುತ್ತುಂ ಮನದೊಳ್ ಸೈರಿಸಲಾಱಿ೦ ನಿನಗೆನಸುಂ ಕರುಣಮಿಲ್ಲ ಮರವಾನಿಸನಯ್
--------------
ಶ್ರೀವಿಜಯ
ಬರಮೆಮಗೀಗೆ ದೇವತೆಗಳಾದರದಿಂ ಕರುಣಿಪ್ಪುದಕ್ಕೆ ಬಂ ಧುರಗುಣ ಬಂಧುಸಂತತಿಯನೆಂಬುದು ಕಾರಕದೋಷಮಾಗಳುಂ ಬರವನಮೋಘಮೀಗೆಮಗೆ ದೇವತೆಗಳ್ ಕರುಣಿಪ್ಪುದಕ್ಕೆ ಬಂ ಧುರ ಗುಣಬಂಧುಸಂತತಿಗೆ ನಿಕ್ಕುವಮೆಂಬುದದುಷ್ಟಕಾರ (ಕಂ)
--------------
ಶ್ರೀವಿಜಯ
ಬೆಳೆದೊಱಗಿದ ಕೞಮೆಗಳುಂ ತಿಳಿಗೊಳದೆಒಳಗಲರ್ದ ಸರಸಿಜಪ್ರತತಿಗಳುಂ ಕಳಹಮಸೆಗಳ್ಗೆ ಕೋಮಳ ವಿಳಾಸವತಿಗಳ್ಗೆ ಪಡೆಗುಮೊಸಗೆಯನಾಗಳ್
--------------
ಶ್ರೀವಿಜಯ
ಮನದೊಳಗಾಗಳುಂ ನಿಱೆ ಸದಾ ಮುಳಿಸಂ ಗತರಾಗ ಮೋಹನೊ ಯ್ಯನೆ ಮುನಿನಾಥನೆಂಬ ವಚನಾಂತರಮಿಂತಿದು ದಾಕ್ಷಿಣಾತ್ಯಕಂ ಮನದೊಳಗಾಗಳುಂ ನಿಱೆ ಸದೊಯ್ಯನೆ ಮೋಹಮನಂತೆ ರಾಗಮಂ ಮುನಿಸುಮನೊಲ್ಲದಂ ಮುನಿಪನೆಂಬುದಿದಕ್ಕುಮುದೀಚ್ಯವಾಚಕಂ
--------------
ಶ್ರೀವಿಜಯ
ಮೊದಲೊಳ್ ಸಮಾಸಪದಮುಮ ನೊದವಿಸಿ ಪೇೞ್ದದಱ ತುದಿಯೊಳಸಮಾಸ ಪದಾ ಸ್ಪದಮಾಗಿ ನಿಱೆಸೆ ಕರ್ವ್ವಿನ ತುದಿಯಂತಿರೆ ವಿರಸಮಕ್ಕುಮದು ತೊದಳುಂಟೇ
--------------
ಶ್ರೀವಿಜಯ
ಸಂಧಿಗಳುಂ ಕೆಲವೆಡೆಯೊಳ್ ಬಂದು ವಿರೂಪಂಗಳಾಗಿ ಸಮನಿಸಿ ಕವಿತಾ ಬಂಧನದೊಳಾಗೆ ದೋಷಾ ಬಂಧುಗೆ ಶಶಲಕ್ಷ್ಮದಂತೆ ಕಱಿಯಂ ತರ್ಕ್ಕುಂ
--------------
ಶ್ರೀವಿಜಯ