ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೆಮುಚ್ಚಿ ಕಣ್ಗಲಮ ವನ ಕರಿ ಮೆಲ್ಲದೆ ಲಲಿತ ಸಲ್ಲಕೀಪಲ್ಲವಮಂ ಸ್ಮರವಶದಿಂದಿರ್ದುದು ನಿಜ ಕರೇಣುಪೇಚಕನಿರೂಪಿತಾಯತಹಸ್ತಂ ಕ್ರಿಯಾಸ್ವಭಾವಾಖ್ಯಾನಂ
--------------
ಶ್ರೀವಿಜಯ
ಕಮಳಂ ಲಲಿತಭ್ರೂವಿ ಭ್ರಮಮಂ ವಿಸ್ಮಿತವಿಲೋಲಲೋಚನಯುಗಮಂ ಸಮವಾಯಮಳ್ಳೊಡದು ನಿ ನ್ನ ಮೊಗಕ್ಕೆಣೆಯೆಂಬುದದ್ಭುತೋಪಮೆ ನಿಯತಂ ಅದ್ಭುತೋಪಮೆ
--------------
ಶ್ರೀವಿಜಯ
ಶ್ರೀವನಿತಾಪ್ರಸವದಿನಾ ಲಾವಣ್ಯದಿನತಿಗಭೀರಭಾವದೆ ನೀನಿಂ ತಾ ವಾರಿಧಿಯಂ ಪೋಲ್ತಯ್ ಕೇವಲಭೇದಂ ದ್ವಿತೀಯ ಲಲಿತಾಕಾರಂ ಏಕವ್ಯತಿರೇಕಂ
--------------
ಶ್ರೀವಿಜಯ
ಸಮಱುಗೆಯಿಲ್ಲದ ಮುಱಕಮು ಮಮರ್ದಿರೆ ಕೆಯ್ಗೆಯ್ಯದೊಪ್ಪುವಂದಮುಮವಳಾ ನೆವಮಿಲ್ಲದ ದರಹಸಮುಂ ಸಮದಾಲಸಲಲಿತಗಮನಮುಂ ಸೊಗಯಿಸುಗುಂ
--------------
ಶ್ರೀವಿಜಯ