ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರೆದಿರೆ ರಾಗಂ ತನ್ನೊಳ್ ನಿರಂತರಂ ಗಗನವಿವರ ಮೊಪ್ಪಿತ್ತಾದಂ ವರ ಪಾರಿಜಾತ ಕುಸುಮೋ ತ್ಕರ ಸಾಂದ್ರಪರಾಗ ವಿಸರ ಪಿಂಜರಿತಂಬೋಲ್
--------------
ಶ್ರೀವಿಜಯ
ಪರೆದಿರೆ ಸಂಧ್ಯಾರಾಗಂ ನಿರಂತರಂ ಗಗನವಿವರಮೊಪ್ಪಿತ್ತೆಂದಾ ದರದಿಂ ಪೇೞಲ್ ಬಗೆದಂ ರಿತೆ ಸಂಧ್ಯಾಪದಮನಿಡದೆ ಪೇೞ್ವುದು ದೋಷಂ
--------------
ಶ್ರೀವಿಜಯ
ವಿಪರೀತಂ ತರುತತಿಯ ವೊ ಲಪರಾಗಂ ಶುದ್ಧಭೂಮಿವೋಲ್ ಪದ್ಮಿನಿವೋ ಲುಪಗತವಿಭ್ರಮ ರಹಿತಂ ಕುಪಿತಾಕೃತಿಯೆಂಬುದುಪಮೆ ಸಂಧಾನಾಂಕಂ ಸಂಧಾನೋಪಮೆ
--------------
ಶ್ರೀವಿಜಯ
ಶರದಾಗಮದೊಳ್ ಕಳಹಂ ಸರವಮ ಪೆರ್ಚಿತ್ತು ಕಿವಿಗೆ ಸೊಗಯಿಸಿ ಪೀನಂ ವಿರಳತರಮಾಯ್ತು ಬರ್ಹಿಣ ವಿರಾವಮುರುಮುದವಿರಾಮ ವಿರಸ ವಿರಾಗಂ
--------------
ಶ್ರೀವಿಜಯ