ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತಿವಿಶದ ಯಶೋವೃತ್ತಂ ನತಸಕಳಾರಾತಿಜನವಿತಾನಂ ಮತ್ತಂ ವಿತತ ಶ್ರೀಸಂಪತ್ತಂ ಶತಮಖ ಸದೃಶಾನುಭಾವನೊಲವಿಂ ಪೆತ್ತಂ
--------------
ಶ್ರೀವಿಜಯ
ಅಲಘು ಭುಜನಾಗಿಯುಂ ನಿ ಶ್ಚಲನಾಗಿಯುಮಖಿಳ ಭೂಭೃದುತ್ತುಂಗತೆಯೊಳ್ ನೆಲಸಿಯುಮೆಯ್ದದು ನಿನ್ನಾ ವಿಲಸಿತಮಂ ಮೇರು ಕಠಿನಭೋಗಾಧಾರಂ
--------------
ಶ್ರೀವಿಜಯ
ಕುಸುಮಂ ಸ್ವಿತಮಳಿ ನಯನಂ ಕಿಸಲಯಮಧರಂ ಭುಜದ್ವಯಂ ವಿಟಪಂ ಮ ತ್ತಸುವಲ್ಲಭೆ ಲತೆಯೆಂಬುದಿ ದಸಮಸ್ತಂ ವ್ಯಸ್ತರೂಪಕಕ್ರಮಮಖಿಲಂ ವ್ಯಸ್ತರೂಪಕಂ
--------------
ಶ್ರೀವಿಜಯ
ಸಕಲಜನವಿನುತನಂ ಶತ ಮಖ ಸದೃಶ ವಿಶಾಲ ವಿವಿಧ ವಿಭವೋದಯನಂ ಪ್ರಗತ ಗುಣಗಣನನರಿಬಲ ವಿಘಟನನಂ ಕಂಡನಣುವನಾ ರಾಘನಂ
--------------
ಶ್ರೀವಿಜಯ