ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

[ಗೋಮೂತ್ರಿಕಂ] ಸಯಮಕಂ ಪ್ರೇಮದಿಂ ಗೋಪಿತಕ್ರಿಯಂ ಶ್ರೀಮದರ್ಧಭ್ರಮಂ ಚಕ್ರನಾಮಂ ಮುರಜಬಂಧಕಂ ಇವು ದುಷ್ಕರ ಕಾವ್ಯಂಗಳ್ ಸವಿಶೇಷವರ್ತಿಗಳ್ ಸುವಿಚಾರಿತಮೀ ತೋರ್ಪೆ [ನಿ] ವಱ ಲಕ್ಷ್ಯಭೇದಮಂ
--------------
ಶ್ರೀವಿಜಯ
ಇಂತುದಿತ ಭೇದಮಂ ದೃ ಷ್ಟಾಂತಾಳಂಕಾರಮಾರ್ಗಮಂ ಕನ್ನಡದೊಳ್ ಸಂತತಗುಣಮಂ ಕೈಕೊ ಳ್ವಂತಾಗಿರೆ ಬಗೆದು ಪೇೞ್ಗೆಪರಮ ಕವೀಶರ್
--------------
ಶ್ರೀವಿಜಯ
ದೊರೆಕೊಳ್ವಂತಿರೆ ಮುನ್ನಂ ವಿರೋಧಿಗತಮಾರ್ಗಭೇದಮಂ ತೋಱಿದೆನಾ ದರದಿನುಪಮಾದಿಗಳೊಳಂ ನಿರುತಮನುಕ್ತಮುಮನಱಿಗೆ ಲಕ್ಷ್ಯಾಂತರದೊಳ್
--------------
ಶ್ರೀವಿಜಯ
ಭಾವೆಯಂ ನುಸುಳುಮಸ್ಪಷ್ಟಾಕ್ಷರಮು ಮಾವರ್ಣವ್ಯತ್ಯಯಮಂ ಬಿಂದುಚ್ಯುತಿಯಂ ಭಾವಿಸಿದೊರ್ನುಡಿಯಂ ವರ್ಣಚ್ಯುತಮಂ ಕೇವಳಮವಱ ಭೇದಮಂ ಸುಸಮಸ್ತಕಮಂ
--------------
ಶ್ರೀವಿಜಯ
ಸಂತತವಿಂತೆಸೆವಪ್ಪ ರ್ಥಾಂತರ ವಿನ್ಯಾಸಭೇದಮಂ ಬಗೆಗೆ ಬುಧರ್ ಮುಂತಣ ಲಕ್ಷಣಲಕ್ಷ್ಯಯು ಗಾಂತರ್ಗತಭೇದಮಕ್ಕುಮಾ ವ್ಯತಿರೇಕಂ
--------------
ಶ್ರೀವಿಜಯ