ಒಟ್ಟು 12 ಕಡೆಗಳಲ್ಲಿ , 1 ಕವಿಗಳು , 12 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿಗೆ ದುರಾಹವರಂಗಾಂ ತರದೊಳಭೀತಂ ನಿಜಾರಿಸಮಿತಿಗಳಿಂದಂ ನೆರೆದ ಜಯಂಗೊಂಡಾಗಡೆ ಸುರಾಂಗನಾಸುರತವಿಷಯಸುಖಮಂ ಕೊಟ್ಟಂ
--------------
ಶ್ರೀವಿಜಯ
ಅೞಿಪಿದವರುಂ ವಿಭೀತರು ಮೞಲ್ದರುಂ ಸಲೆ ವಿಯೋಗದಿಂ ನಿಜ ಜನದಿಂ ಕೞಿಯೆ ಪರಾರ್ಥಿಗಳುಂ ಬಾ ಯೞಿದೊಳ್ದಿಂತಿದನೆ ಯುಕ್ತಪುನರುಕ್ತಿಕಮಂ
--------------
ಶ್ರೀವಿಜಯ
ಉತ್ಸವದಿಂದೆ ಹಾಸ್ಯರಸಮಾ ಮಧುರೋಕ್ತಿಗಳಿಂದಮಲ್ತೆ ಭೀ ಭತ್ಸರಸಾಂತರಂ ಶಿಥಿಲಬಂಧನದಿಂ ಸತತಂ ಭಯಾನಕೋ ದ್ಯತ್ಸುರಸಂ ಕರಂ ವಿಷಯಬಂಧನದಿಂ ನೃಪತುಂಗದೇವ ಮಾ ರ್ಗೋತ್ಸವಮೂರ್ಜಿತೋಕ್ತಿಗಳಿನಕ್ಕತಿರೌದ್ರರಸಂ ರಸಾವಹಂ
--------------
ಶ್ರೀವಿಜಯ
ತಳಮಳ[ಗೊ]ತ್ತುಂ ಜನಿತನಿಜಭೀತಿ ಮನಂ ಗೊಳೆ ಕಳವಳಿಸಿ ಚಲಿತ ನಿಲಲಣ್ಮದೆ [ಮೊ] ಕ್ಕಳ[ಮೊ]ಳಗೆ ಸುೞಿದರರಸಂ ಮನದೊಳ್ ಮುಳಿದಸಿಯನೆ ನೋ[ಡೆ] ಪರಿವಾರದವರ್ (ವರ್ಣಚ್ಯುತಕಂ)
--------------
ಶ್ರೀವಿಜಯ
ನಯವಿನಿಮಯ ನಾನಾ ಮಂತ್ರ ದೂತ ಪ್ರಯಾಣಾ ಕ್ಷಣ ಸಮಯ ವಿಳಾಸೋಲ್ಲಾಸಿ ಸಂಗ್ರಾಮಿ ಕಾಂಗಂ ಭಯವಿರಹಿತ ವೀರ್ಯೌದಾರ್ಯ ಗಂಭೀರ ಕಾರ್ಯಾ ಶ್ರಯ ವಿಶದಗುಣಶ್ರೀನಾಯಕೋತ್ಕರ್ಷವೇದ್ಯಂ
--------------
ಶ್ರೀವಿಜಯ
ನವವಿವರಾವೃತ ಪೂತಿ ದ್ರವ ತ್ವಗಾವೃತವಿಮಿಶ್ರಮಾಂಸೋಪಚಿತಮ ಧ್ರುವಮಸುಚಿತ್ರಭ್ರಮಿತಾ ಸ್ಥಿವಹಂ ಮೆಯ್ ಬಗೆವೊಡಿಂತು ಕಿಸುಗುಳಮಾದಂ ಭೀಭತ್ಸ
--------------
ಶ್ರೀವಿಜಯ
ನಿನ್ನಂತೆ ಸುರೇಶ್ವರನು ತ್ಪನ್ನಮಹೈಶ್ವರ್ಯನೆಂಬುದುಂ ಜಲನಿಧಿ ತಾಂ ಸನ್ನುತ ಗಭೀರನೆಂಬುದು ಮಿನ್ನದು ಹೀನಾಧಿಕಪ್ರಶಂಸಾನುಗುಣಂ
--------------
ಶ್ರೀವಿಜಯ
ಬುಧಗುಣಗಣನಾತೀತಾಂತರಂ ಶಬ್ದತತ್ತ್ವಾಂ ಬುಧಿವಿವಿಧವಿಧಾನಾಲಂಕ್ರಿಯಾವೀ[ಚಿಮಾಲಾ] ವಿಧುರಗತಿ ವಿಲೋಡ್ಯಂ ತಳ್ತು ನಿಲ್ತಪ್ಪುದಾವಾ ಗಧಿಪವಚನಮಾಲಾಪಾವನೀಯಂ ಗ[ಭೀರಂ]
--------------
ಶ್ರೀವಿಜಯ
ವೀರರಸಮ ಸ್ಫುಟೋಕ್ತಿಯಿನುದಾರತಮಂ ಕರುಣಾರಸಂ ಮೃದೂ ಚ್ಚಾರಣೆಯಿಂದಮದ್ಭುತರಸಂ ನಿಬಿಡೋಕ್ತಿಗಳಿಂದಮಲ್ತೆ ಶೃಂ ಗಾರರಸಂ ಸಮಂತು ಸುಕುಮಾರತರೋಕ್ತಿಗಳಿಂ ಪ್ರಸನ್ನಗಂ ಭೀರತರೋಕ್ತಿಯಿಂ ಪ್ರಕಟಮಕ್ಕೆ ರಸಂ ಸತತಂ ಪ್ರಶಾಂತ [ದಾ]೦
--------------
ಶ್ರೀವಿಜಯ
ವೀರಾದ್ಭುತ ಕರುಣಾ ಶೃಂ ಗಾರ ಭಯಾನಕ ಸರೌದ್ರ ಭೀಭತ್ಸ ಮಹಾ ಸಾರತರ ಹಾಸ್ಯ ಶಾಂತಾ ಧಾರಂ ನವವಿಧವಿಕಲ್ಪಮಾ ರಸಮಾರ್ಗಂ
--------------
ಶ್ರೀವಿಜಯ
ಶ್ರೀವನಿತಾಪ್ರಸವದಿನಾ ಲಾವಣ್ಯದಿನತಿಗಭೀರಭಾವದೆ ನೀನಿಂ ತಾ ವಾರಿಧಿಯಂ ಪೋಲ್ತಯ್ ಕೇವಲಭೇದಂ ದ್ವಿತೀಯ ಲಲಿತಾಕಾರಂ ಏಕವ್ಯತಿರೇಕಂ
--------------
ಶ್ರೀವಿಜಯ
ಸುಭಟರ್ಕಳ್ ಕವಿಗಳ್ ಸು ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್ ಅಭಿಮಾನಿಗಳತ್ಯುಗ್ರರ್ ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್
--------------
ಶ್ರೀವಿಜಯ