ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತಿಶಯಧವಳೋ[ರ್ವಿ]ಪನೀತಿಮಾರ್ಗೋ ಚಿತಗತಿಭಾವಿತಮಾ[ರ್ಗಾ]ಳಂಕ್ರಿಯಾರ್ಥಂ ಚತುರಕವಿಜನಾನುಯಾತ ಸಾರ ಸ್ವತಗುಣದೊಳ್ ಬಗೆದಂತೆ ಕೂಡಲಾರ್ಕುಂ (ವೃತ್ತ)
--------------
ಶ್ರೀವಿಜಯ
ಇಂತಿದು ದಕ್ಷಿಣ ಮಾರ್ಗದ ಕಾಂತಮಸಂಭಾವಿತಾರ್ಥಮುದ್ದಾಮೋಕ್ತಂ ಸಂತತಮುತ್ತರ ಮಾರ್ಗಗ ತಾಂತರಮದನಿಂತು ಕುಱುತು ತಱೆಸಲ್ಗೆ ಬುಧರ್
--------------
ಶ್ರೀವಿಜಯ
ಭಾವಿಸಿ ಸಮಸ್ತವಸ್ತು ವಿ ಭಾವಿತ ಜಾತಿಕ್ರಿಯಾಗುಣದ್ರವ್ಯಸ್ವಾ ಭಾವಿಕ ಗುಣಮಂ ಪೇೞ್ವುದು ಕೇವಲಮಾ ಜಾತಿಯೆಂಬ ಸದಳಂಕಾರಂ
--------------
ಶ್ರೀವಿಜಯ
ಮದಮಾನಮಾಯಭಯಲೋಭವಿಷಾದಹರ್ಷಾ ಭ್ಯುದಿತಾಂತರಂಗರಿಪುವರ್ಗ ಜಯಾವತಾರಂ ವಿದಿತಸ್ಪಧೀ ವಿಭವ ಭಾವಿತ ವಿಶ್ವಲೋಕಂ ಬುಧರ್ಗೋತು ಕಾವನನುನೀತಗೃಹೀತವಾಕ್ಯಂ
--------------
ಶ್ರೀವಿಜಯ