ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತಿದು ದಕ್ಷಿಣ ಮಾರ್ಗದ ಕಾಂತಮಸಂಭಾವಿತಾರ್ಥಮುದ್ದಾಮೋಕ್ತಂ ಸಂತತಮುತ್ತರ ಮಾರ್ಗಗ ತಾಂತರಮದನಿಂತು ಕುಱುತು ತಱೆಸಲ್ಗೆ ಬುಧರ್
--------------
ಶ್ರೀವಿಜಯ
ಇದು ವಿದಿತ ವಿರುದ್ಧಾರ್ಥ ಕ್ಕುದಾಹೃತಂ ಹರಣಮಾತ್ರಮಿನ್ನಪ್ಪುವನುಂ ಸದಭಿಮತ ಕಾವ್ಯಪದವಿಧಿ ವಿದೂರಗತಮಾಗೆ ಪರಿಹರಿಕ್ಕೆ ಬುಧರ್ಕಳ್
--------------
ಶ್ರೀವಿಜಯ
ಕಾಲಮಹೋರಾತ್ರಾದಿಕ ಮಾ ಲಕ್ಷಿತ ಭೇದಮದಱೊಳೊಂದದೊಡಕ್ಕುಂ ಕಾಲವಿರುದ್ಧಂ ದೋಷ ಕ್ಕಾಲಯಮದನಱೆದು ಕೃತಿಯೊಳಿಡದಿರ್ಕೆ ಬುಧರ್
--------------
ಶ್ರೀವಿಜಯ
ಚ್ಯುತಯಾಥಾಸಂಖ್ಯಾರ್ಥ ಪ್ರತೀತದೋಷಾನುವಸಥಮೆಂದಱೆಗೆ ಬುಧರ್ ಸತತತಮದಱೆಯೆ ನಿದರ್ಶನ ಗತಮಿಂತಕ್ಕುಂ ಪ್ರಮೋದದಿಂ ಕವಿಜನದೊಳ್
--------------
ಶ್ರೀವಿಜಯ
ಮದಮಾನಮಾಯಭಯಲೋಭವಿಷಾದಹರ್ಷಾ ಭ್ಯುದಿತಾಂತರಂಗರಿಪುವರ್ಗ ಜಯಾವತಾರಂ ವಿದಿತಸ್ಪಧೀ ವಿಭವ ಭಾವಿತ ವಿಶ್ವಲೋಕಂ ಬುಧರ್ಗೋತು ಕಾವನನುನೀತಗೃಹೀತವಾಕ್ಯಂ
--------------
ಶ್ರೀವಿಜಯ
ಸಂತತವಿಂತೆಸೆವಪ್ಪ ರ್ಥಾಂತರ ವಿನ್ಯಾಸಭೇದಮಂ ಬಗೆಗೆ ಬುಧರ್ ಮುಂತಣ ಲಕ್ಷಣಲಕ್ಷ್ಯಯು ಗಾಂತರ್ಗತಭೇದಮಕ್ಕುಮಾ ವ್ಯತಿರೇಕಂ
--------------
ಶ್ರೀವಿಜಯ