ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಉಕ್ತವಿಚಾರಂ ನ್ಯಾಯನಿ ಯುಕ್ತಂ ಕ್ರಮವಿನ್ನದಕ್ಕೆ ಬಾರದುವೆಲ್ಲಂ ವ್ಯಕ್ತಂ ನ್ಯಾಯವಿರುದ್ಧಂ ಪ್ರೋಕ್ತ ಮಹಾದೋಷಮಂತು ಪೇೞಲ್ಕೆಂತುಂ
ಎಂದಿಂತು ಪೇೞ್ದ ಮಾಳ್ಕೆಯೊ ಳೊಂದುವುದುಮನೊಂದಿ ಬಾರದುದುಮಂ ಪೀನಂ ಸಂದೆಯಮಿಲ್ಲದೆ ಸಲೆ ತಱೆ ಸಂದೋಸ [ರಿ] ಸುವುದು ಕಾವ್ಯರಚನಾಕ್ರಮದೊಳ್
ಗೞಿಯಿಸಿದರ್ಥಂ ಸಲೆ ಪಾಂ ಗೞಿಯದೆಯುಂ ಶಬ್ದಮೊಂದದಿರ್ದೊಡೆ ಮುತ್ತುಂ ಮೆೞಸುಂ ಕೋದಂತಿರ್ಕುಂ ಕೞಲ್ಚಿ ಕಳೆಗೊಂದಿ ಮುಂದೆ ಬಾರದ ಪದಮಂ
ಛಂದಕ್ಕೆ ಬಾರದೆಂದಱಿ ದೊಂದೊಂದಱೊಳೊಂದಿ ಬಂದು ನಿಂದಕ್ಕರಮಂ ಸಂಧಿಸದೆ ಪೇೞ್ದೊಡದು ಕೃತಿ ನಿಂದಿತಮೆಂದುಂ ವಿಸಂಧಿಯೆಂಬುದು ದೋಷಂ
ನೃಪಕನ್ಯಕಾ ಸ್ವಯಂವರ ವಿಪುಳ ಮಹೋತ್ಸವ ವಿವಾಹದೊಳ್ ಬಂದಿರ್ ಮು ನ್ನಪವಾದವಾದುದೆನಗೇಂ ಚಪಲಾಧ್ವಜನೋಕ್ತಿಯಿಂದಮಿಂ ಬಾರದಿರಿಂ