ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾರಣಮಾಗಿರ್ಪುದಳಂ ಕಾರಮ ಹೇತೂಕ್ತಿಯೆಂಬುದದು ತಾಂ ನಾನಾ ಕಾರಂ ಜ್ಞಾಪಕ ಸದಳಂ ಕಾರಸುಮಾರ್ಗ ಪ್ರಯೋಗಮೀ ತೆಱನದಱಾ
--------------
ಶ್ರೀವಿಜಯ
ಸವಿಶೇಷಾಲಂಕಾರೋ ದ್ಭವಮಾಗಿಯುಮೊಂದುವರ್ಥದೊಳ್ ಸಂಬಂಧ ವ್ಯವಧಾನಮಾದೊಡಕ್ಕುಂ ವ್ಯವಹಿತದೋಷಂ ಪ್ರಯೋಗಮೀತೆಱದನಱಾ
--------------
ಶ್ರೀವಿಜಯ
ಸುಕುಮಾರತರಾಕ್ಷರಪದ ನಿಕರ ವಿಶಿಷ್ಟಪ್ರಯೋಗಗತಮಪ್ಪುದದಾ ಸುಕುಮಾರಮೆಂಬುದಕ್ಕುಂ ಪ್ರಕಟಿತಮದಱಾ ಪ್ರಯೋಗಮೀ ತೆಱನಕ್ಕುಂ
--------------
ಶ್ರೀವಿಜಯ