ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದಱೆ೦ ಪರಮಾಗಮ ಕೋ ವಿದನಪ್ಪುದು ಪೂರ್ವಕಾವ್ಯರಚನೆಗಳಂ ತಾಂ ಮೊದಲೊಳ್ ಕಲ್ತಂಗಲ್ಲದೆ ಪದದೊಳ್ ಜಾಣುಂ ಬೆಡಂಗುಮಕ್ಕುಮೆ ಕೃತಿಯೊಳ್
--------------
ಶ್ರೀವಿಜಯ
ಇದು ನಿಬಿಡ ಶಿಥಿಲಬಂಧಾ ಸ್ಪದ ಮಾರ್ಗದ್ವಿತಯಗದಿತ ಲಕ್ಷ್ಯವಿಭಾಗಂ ಸದಭಿಕಮನೀಯಗುಣಮ ಪ್ಪುದು ನಿಯತಂ ಕಾಂತಮೆಂಬುದಭಿಗೀತಾರ್ಥಂ
--------------
ಶ್ರೀವಿಜಯ
ವರ ಹಂಸಕದಂಬಕಮದು ಶರದಂಬುದಮಲ್ತು ಮುಖರನೂಪುರ ಸಂವಾ ದಿರವಂ ನೆಗೆೞ್ದಪ್ಪುದು ಬಂ ಧುರಮದೞಿ೦ದಿದಱೊಳೆಂಬುದುಪಮಾಕ್ಷೇಪಂ ಉಪಮಾಕ್ಷೇಪ
--------------
ಶ್ರೀವಿಜಯ