ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತಧಿಕ ವಿಶೇಷಣ ಗಣ ಮಂ ತಡೆಯದೆ ಪೇೞ್ವೊಡಂಕಚಾರಣೆಗಳೊಳಂ ಸಂತಂ ಪೇೞ್ಗುೞಿದಾವೆಡೆ ಯಂತರದೊಳಮಾಗದೆಂದನತಿಶಯಧವಳಂ
--------------
ಶ್ರೀವಿಜಯ
ಇಂತಿಂತೆ ಪೇೞ್ವೊಡೆಲ್ಲಮ ನಂತಾತ್ಮಕಮಕ್ಕುಮಾ ವಿರುದ್ಧದ ಭೇದಂ ಸಂತಯಿಸಿ ಬಲಿದು ಮನಮನ ದಂತಱೆಸಲೆ ಪೇೞಲಾರ್ಪೆನೆಂಬವನೊಳನೇ (ಗೀತಿಕೆ)
--------------
ಶ್ರೀವಿಜಯ
ದೊರೆಕೊಂಡು ಮನದ ಬಗೆಯಂ ಪಿರಿದಾಗಿರೆ ಪಿರಿಯರೊಸಗೆಯಂ ಪೇೞ್ವೊಡದುಂ ಪರಮಾಶೀರಾರ್ಥಾಳಂ ಕರಣಾಂತರಮದಱ ಲಕ್ಷ್ಯಮೀ ತೆಱನಕ್ಕುಂ
--------------
ಶ್ರೀವಿಜಯ
ವನರುಹದಂತೆ ಮುಖಂ ಲೋ ಚನಮೆಸೆವುತ್ಪಳದವೋಲ್ ತಳಂ ತಳಿರೆಂತೆಂ ದನುರೂಪಮಾಗಿ ಪೇೞ್ವೊಡ ದೆನಸುಂ ವಸ್ತೂಪಮಾನಮೆಂಬುದು ಪೆಸರಿಂ ವಸ್ತೂಪಮೆ
--------------
ಶ್ರೀವಿಜಯ