ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತುಂ ಭೇದಮನಿನಿಸಾ ರ್ಪಂತುತ್ತರ ದಕ್ಷಿಣೋರು ಮಾರ್ಗದ್ವಯದಾ ಚಿಂತಿತ ಪುರಾಣ ಕವಿ ವಿದಿ ತ್ನಾಂತರಮಂ ಪೇೞ್ವಿನಱಿವಮಾಳ್ಕೆಯೊಳೆನ್ನಾ
--------------
ಶ್ರೀವಿಜಯ
ಅಪರಿಮೇಯಮೆ ದೋಷಗುಣೌಘಮಿಂ ತುಪಚಿತಕ್ರಮದಾರೆಯೆ ಕಾವ್ಯದೊಳ್ ವಿಪುಳ ವೃತ್ತಿಯೊಳೊಂದಿರೆ ಪೇೞ್ವಿನ ಭ್ಯುಪ [ಮಿತೋ] ಕ್ತಿ ಗುಣಾವಗುಣಂಗಳಂ
--------------
ಶ್ರೀವಿಜಯ
ಆರುಮೀ ಗುರುಲಘೂದಿತದೋಷ ವಿಶೇಷಮಂ ಧೀರಸತ್ವರಱೆದುಂ ಕುಱೆಗೊಂಡು ವಿಭಾಗಿಸರ್ ಕಾರಣಾಂತರಮನಂತದಱೊಳ್ ತಱೆಸಂದು ನಿ ರ್ಧಾರಿತ ಕ್ರಮದೆ ಪೇೞ್ವಿನುದಾಹರಣಂಗಳಂ
--------------
ಶ್ರೀವಿಜಯ
ಇಂತು ಪೇಳ್ದೊಡಿದು ಗೌರವದೋಷದ ಮಾೞ್ಕಿನಿ ಶ್ಚಿಂತಮೀ ತೆಱದವಂ ಕಳೆಗಾ ಕೃತಿಯತ್ತಣಿಂ ಮುಂತೆ ಪೇೞ್ವಿ ಕುಱೆಪಂ ಕುಱೆಗೊಂಡು ಕವೀಶರಾ ರ್ಪಂತು ಪಿಂಗಿಸುಗೆ ಕಾವ್ಯದಿನಾ ಲಘುದೋಷಮಂ
--------------
ಶ್ರೀವಿಜಯ