ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ದಲ್ ವರ್ಗಪ್ರಾಸ ಕ್ಕುದಾಹೃತಂ ಕುರಿತು ಶಷಸ ವರ್ಣತ್ರಯಮುಂ ವಿದಿತ ಪ್ರಾಸವಿವಿಕ್ತಾ ಸ್ಪದದೊಳ್ ನಿಲೆ ಪೇೞ್ದೊಡದು ಸಮೀಪ ಪ್ರಾಸಂ
--------------
ಶ್ರೀವಿಜಯ
ಕಂದಂಗಳ್ ಫಲವಾಗಿರೆ ಸುಂದರ ವೃತ್ತಂಗಳಕ್ಕರಂ ಚವುಪದಿ ಮ ತ್ತಂ ದಲ್ ಗೀತಿಕೆ ತಿವದಿಗ ಳಂದಂಬೆತ್ತೆಸೆಯೆ ಪೇೞ್ದೊಡದು ಚತ್ತಾಣಂ
--------------
ಶ್ರೀವಿಜಯ
ಕುಱಿತಂತೆ ಪೇೞ್ದ ಪದದೊಳ್ ಮೆಱಿಯದೊಡೆಲ್ಲಂ ವಿವಕ್ಷಿತಾರ್ಥಮಶೇಷಂ ಪೆಱತೊಂದಲ್ಲಿಲ್ಲದುಮುಮ ನಱಿವವರಿಟ್ಟಱಿಯೆ ಪೇೞ್ದೊಡದು ನೇಯಾರ್ಥಂ
--------------
ಶ್ರೀವಿಜಯ
ಛಂದಕ್ಕೆ ಬಾರದೆಂದಱಿ ದೊಂದೊಂದಱೊಳೊಂದಿ ಬಂದು ನಿಂದಕ್ಕರಮಂ ಸಂಧಿಸದೆ ಪೇೞ್ದೊಡದು ಕೃತಿ ನಿಂದಿತಮೆಂದುಂ ವಿಸಂಧಿಯೆಂಬುದು ದೋಷಂ
--------------
ಶ್ರೀವಿಜಯ