ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಪ್ರತೀತಿಯಿಂಶ ಬ್ದಾದರದಿಂ ಸದೃಶಮಾದ ವಸ್ತುದ್ವಯದೊಳ್ ಭೇದಮನಱಿ ಪುವುದುಚಿತ ಗು ಣೋದಯ ಕೃತವಾಕ್ಯವಿಸ್ತರಂ ವ್ಯತಿರೇಕಂ
--------------
ಶ್ರೀವಿಜಯ
ಒಂದೊಂದಱೊಳೊಂದದುವಂ ತಂದೊರ್ಬುಳಿಮಾಡಿ ತದ್ವಿಶೇಷಾಂತರಮಂ ಸಂದೇಹಮಿಲ್ಲದಱಿ ಪುವು ದೊಂದೆ ವಿರೋಧಾಬಿಧಾನಮದುಮಿಂತಕ್ಕುಂ
--------------
ಶ್ರೀವಿಜಯ
ಗುಣದೊಳಮಱಿ ಪುವುದಿನಿಸವ ಗುಣಮಂ ದೋಷದೊಳಮಿನಿಸು ಗುಣಮಂ ತಂದಿ ರ್ದೆಣಿಸುವುದು ಲೇಶಮೆಂಬುದು ಗಣಿದದಿನಿಂತಕ್ಕುಮದಱ ಲಕ್ಷ್ಯವಿಭಾಗಂ
--------------
ಶ್ರೀವಿಜಯ
ತಱಿಸಂದು ಪಲವು ತೆಱದಿಂ ತೆಱಿದಿರೆ ನಿಗೞ್ದುರ್ದುದೊಂದು ವಸ್ತುಸ್ಥಿತಿಯಂ ಮಱಸಿ ಪೆಱತೊಂದು ಮಾಳ್ಕೆಯಿ ನಱಿಪುವುದುತ್ಪ್ರೇಕ್ಷೆಯೆಂಬುದಿಂತದಱ ತೆಱ೦
--------------
ಶ್ರೀವಿಜಯ