ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತುಂ ಪುರಾಣಕವಿಗಳ ಸಂತ ತ ಗತ ಮಾರ್ಗಗದಿತ ದೋಷಂಗಳುಮಂ ಚಿಂತಿಸಿ ಮತ್ತೆನ್ನಱೆವುದು ಮಂ ತಱೆಸ ಲೆ ಬುಧಜನಕ್ಕೆ ಕೆಲವಂ ಪೇೞ್ವೆಂ
--------------
ಶ್ರೀವಿಜಯ
ಅಂತುಂ ಭೇದಮನಿನಿಸಾ ರ್ಪಂತುತ್ತರ ದಕ್ಷಿಣೋರು ಮಾರ್ಗದ್ವಯದಾ ಚಿಂತಿತ ಪುರಾಣ ಕವಿ ವಿದಿ ತ್ನಾಂತರಮಂ ಪೇೞ್ವಿನಱಿವಮಾಳ್ಕೆಯೊಳೆನ್ನಾ
--------------
ಶ್ರೀವಿಜಯ
ದೊರೆಕೊಂಡಿರೆ ಸೊಗಯಿಸುಗುಂ ಪುರಾಣ ಕಾವ್ಯ ಪ್ರಯೋಗದೊಳ್ ತತ್ಕಾಲಂ ವಿರಸಮ ಕರಮವು ದೇಸಿಗೆ ಜರದ್ವಧೂವಿಷಯ ಸುರತ ರಸರಸಿಕತೆವೋಲ್
--------------
ಶ್ರೀವಿಜಯ
ಪರಮ ಶ್ರೀಕೃತಿವಧುವಾ ಶರೀರಶೋಭಾಕರಂಗಳಪ್ಪ ಗುಣಂಗಳ್ ನಿರತಿಶಯಾಲಂಕಾರ ಪ್ರರೂಪಿತಂಗಳ್ ಪುರಾಣ ಕವಿ ವಿದಿತಂಗಳ್
--------------
ಶ್ರೀವಿಜಯ
ಭಾವಿಸಿ ಶಬ್ದತತ್ತ್ವಸಮಯಸ್ಥಿತಿಯಂ ಕುಱಿ ತೊಂದಶೇಷಭಾ ಷಾವಿಷಯೋಕ್ತಿಯಂ ಬಗೆದುನೋಡಿ ಪುರಾಣಕವಿಪ್ರಭುಪ್ರಯೋ ಗಾವಿಳ ಸದ್ಗುಣೋದಯಮನಾಯ್ದವಱಿ೦ ಸಮೆದೊಂದು ಕಾವ್ಯದಿಂ ಶ್ರೀವಿಜಯಪ್ರಭೂತಮುದಮಂ ತನಗಾಗಿಸಿದೊಂ ಕವೀಶ್ವರಂ
--------------
ಶ್ರೀವಿಜಯ