ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಣಯುತನಪ್ಪನಂ ಸುಭಟನಪ್ಪನನಾಯುಧಯುಕ್ತನಪ್ಪನಂ ಪ್ರಣುತ ಸಮಸ್ತವೈರಿಗಣನಪ್ಪನನುಜ್ಜ್ವಲಕೀರ್ತಿಯಪ್ಪನಂ ಗಣಿದಮನೇನುಮಂ ಬಗೆಯದಾಗಡುಮಂತೆ ಪರೋಪಕಾರಕಾ ರಣಪರನಪ್ಪನಂ ಮನದೆ ಮೆಚ್ಚದರಾರಭಿಮಾನಿಯಪ್ಪನಂ
--------------
ಶ್ರೀವಿಜಯ
ನೃಪತೀ ಪರೋಪಕಾರೀ ವಿಪುಳಗುಣೀ ವಿಶದ ಶಶಧರಾಯತಕೀರ್ತೀ ವ್ಯಪಗತಭಯಾ ದಯಾಲೂ ರಿಪುವರ್ಗಮನಲೆದು ಗೆಲ್ವೆಯಾಗಾಹವದೊಳ್
--------------
ಶ್ರೀವಿಜಯ
ಪರಮಾನುಭಾವನಭಿಮಾನಿ ವಿನೋದಶೀಲಂ ಪರನತ್ಯುದಾರಚರಿತೋದಯನೇಕರೂಪಂ ಸರಸಾಶ್ರಯಪ್ರವರಮೂರ್ತಿ ಪರೋ ಪಕಾರಂ ನಿರತಂ ಗುಣೋದಯನಕಾರಣಧುರ್ಯಮಿತ್ರಂ
--------------
ಶ್ರೀವಿಜಯ