ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರಸುಕುಮಾರನನಾಯತ ತರ ಕಡೆಗಣ್ಣಿಂದ ನೋಡಿ ಕೆಳದಿಸಮೇತಂ ಪರಿಗತನಗೆಯಿಂದಿರ್ದೆಂ ಗುರುನಾಣ್ಭರದಿಂದಮೆಱಗಿ ಮುಖತಾವರೆಯಂ
ನರಪತಿತನಯನನಾಯತ ತರಳಾಪಾಂಗದೊಳೆ ನೋಡಿ ಕೆಳದಿಯರೊಡನಾಂ ಪರಿಗತ ಹಾಸ್ಯದೊಳಿರ್ದೆಂ ಗುರುಲಜ್ಜಾಭರದಿನೆಱಗಿ ಮುಖಸರಸಿಜಮಂ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂ ಜನಿತಮುದಂ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂದುರುಮುದದಿಂ