ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತಿಶಯಮಿತಿಹಾಸೋಪಾಶ್ರಯಂ ಮೇಣ್ ಕಥಾವಿ ಶ್ರುತಚತುರವಿಕಾಶೋತ್ಪಾದಿತಾರ್ಥೋತ್ಕರಮ ಮೇ ಣತಿಕುಶಲ ಸಲೀಲಾಚಾರಲೋಕೋಪಕಾರೋ ದಿತ ಪರಮಗುಣೈಕೋದಾರಧೀರಾಧಿಕಾರಂ
--------------
ಶ್ರೀವಿಜಯ
ಪರಿವೃತ ನೃಪತುಂಗದೇವಮಾರ್ಗಾಂ ತರಗತಬೋಧ ವಿಶೇಷಯಾನಪಾತ್ರಂ ಪರಮಗುಣ ಪರೀತಕಾವ್ಯರತ್ನಾ ಕರದುರುಪಾರಮನೆಯ್ದುಗುಂ ಮಹಾತ್ಮಂ
--------------
ಶ್ರೀವಿಜಯ
ಪರಿವೃತ್ತಿಯೆಂಬುದಕ್ಕುಂ ನಿರುಪಮಮರ್ಥಸ್ವರೂಪ ವಿನಿಮಯ ವಚನಂ ಪರಮಗುಣೋದಯಮದಱಾ ಸ್ವರೂಪಮಂ ಬಗೆದುಕೊಳ್ಗೆ ಮತ್ತೀ ತೆಱದಿಂ
--------------
ಶ್ರೀವಿಜಯ