ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಱ ವಿಪರ್ಯಯ ವಿವಿಧಾ ಸ್ಪದಾಕ್ಷರ ವಿಕಲ್ಪಮಿಂತಿದುತ್ತರ ಮಾರ್ಗಂ ತ್ರಿದಶಾಧೀಶ್ವರಭೂತ್ಯ ತ್ಯುದಾರ ವಿವಿಧಾರ್ಥವಿಭವನೀ ಭೂಪೇಂದ್ರಂ
--------------
ಶ್ರೀವಿಜಯ
ಕುಱಿತು ಸಮುಚ್ಚಯದಾ ಬೞಿ ವಿಕಲ್ಪದಾ ತೆಱದೊಳೆ ದೋಷಮುಮನಂತೆ ಗುಣಮುಮಂ ಕಿಱೆದಱೊಳಱೆಯೆ ಪೇೞ್ದಿನಿಂತೆ ಪೆಱವುಮನೀ ಕುಱೆಪನೆ ಕುಱೆಮಾಡಿ ಪೇೞ್ಗಿ ಕಬ್ಬಮಂ (ವೃತ್ತ)
--------------
ಶ್ರೀವಿಜಯ
ಗಣಿದದೊಳೊಂದಿ ಬರ್ಪ ಪದಮೊಂದೆಡೆಗೊಂ [ಡು] ವಿಶೇಷ್ಯಮುಂ ವಿಶೇ ಷಣಮುಮನೊಂದಲೀಯದಿರೆಯುಂ ಮಿಗೆ ಕಾರಕ ದೋಷ [ಮಲ್ತದು] ಪ್ರಣುತ ಪದಾಂತರೀಕರಣಮಂತದೆ ತಾಣದೊಳಾದೊಡಂ ಮಹಾ ಗುಣಮನೆ ತರ್ಕುಮೇಕ ಬಹುಭೇದವಿಕಲ್ಪಮನಲ್ಲಿ ನೋಡಲಿಂ
--------------
ಶ್ರೀವಿಜಯ
ಪದಪದಾ ವಿಯುತ ನಿಯಮಾ ಸ್ಪದಮಲ್ಲದಳಂಕೃತಂ ಕ್ರಿಯಾಕಾರಕದೊಳ್ ಪುದಿದರ್ಥವ್ಯಕ್ತಿಯನೀ ವುದುಗದ್ಯಮನೇಕ ರೂಪಭೇದ ವಿವಿಕ್ತಂ
--------------
ಶ್ರೀವಿಜಯ
ಪುನರುಕ್ತಮೆಂಬುದಕ್ಕುಂ ನೆನೆಯದೆ ಪೂರ್ವೋದಿತಾರ್ಥ ಪದಪದ್ಧತಿಗೊಂ ದಿನಿಸುಂ ವಿಶೇಷಮಿಲ್ಲದೆ ಜನಿಯಿಸಿದ ಪದಾರ್ಥಮದಱದೀ ದೃಷ್ಟಾಂತಂ
--------------
ಶ್ರೀವಿಜಯ
ಪ್ರತಿಪದಾರ್ಥತತ್ತ್ವಭೇದದೊಳ್ ಪ್ರತಿಷೇಧಮಂ ನೆಗೞ್ಗುಮನಿತೆ ಮಾೞ್ಕಿಯಿಂ ದತಿಶಯಾಕ್ಷೇಪಗಣನಾವ್ಯತಿ ಗತಿ ನೃಪತುಂಗದೇವಮಾರ್ಗದೊಳ್
--------------
ಶ್ರೀವಿಜಯ
ಮೊದಲೊಳ್ ಸಮಾಸಪದಮುಮ ನೊದವಿಸಿ ಪೇೞ್ದದಱ ತುದಿಯೊಳಸಮಾಸ ಪದಾ ಸ್ಪದಮಾಗಿ ನಿಱೆಸೆ ಕರ್ವ್ವಿನ ತುದಿಯಂತಿರೆ ವಿರಸಮಕ್ಕುಮದು ತೊದಳುಂಟೇ
--------------
ಶ್ರೀವಿಜಯ