ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾರಕದೋಷಮುಂ ವಚನದೋಷಮುಮಾ ಗುರುದೋಷಮುಂ ಲಘೂ ಚ್ಚಾರಿತ ಶಬ್ದದೋಷಮುಮದಂತೆ ಸಮುಚ್ಚಯಜಾತದೋಷಮುಂ ಭೂರಿ ವಿಕಲ್ಪದೋಷಮುಮದಿನ್ನವಧಾರಣದೋಷಮುಂ ವಿಶಂ ಕಾ ರಚಿತೋರು ದೋಷಮುಮನೀ ತೆಱದಿಂ ತೞಿಸಲ್ಗೆ ಪಂಡಿತರ್
--------------
ಶ್ರೀವಿಜಯ
ಕುಲಜನೀತನೆ ಪಂಡಿತನೀತನು ಜ್ಜ್ವಲಯಶೋಧಿಕನೀತನೆ ತಿಬ್ಬಮೆಂ ದಲಸಿ ಪೇೞ್ವವಧಾರಣದೋಷಮಂ ನೆಲಸಲೀಯದಿರಿಂ ಕೃತಿನಾರಿಯೊಳ್
--------------
ಶ್ರೀವಿಜಯ
ಪರಮ ಶ್ರೀ ವಿಜಯಕವೀ ಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ ನಿರತಿಶಯ ವಸ್ತುವಿಸ್ತರ ವಿರಚನೆ ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ
--------------
ಶ್ರೀವಿಜಯ
ಶೂರನೀತನೆ ಪಂಡಿತನೀತನೇ ಕ್ಷೀರಗೌರಯಶೋಧಿಕನೀತನೇ ಧಾರಿಣೀತಳದೊಳ್ ಧ್ರುವಮೆಂಬುದಾ ಧಾರಮಿಂತವಧಾರಣದೊಳ್ ಗುಣಂ
--------------
ಶ್ರೀವಿಜಯ