ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲಘು ಭುಜನಾಗಿಯುಂ ನಿ ಶ್ಚಲನಾಗಿಯುಮಖಿಳ ಭೂಭೃದುತ್ತುಂಗತೆಯೊಳ್ ನೆಲಸಿಯುಮೆಯ್ದದು ನಿನ್ನಾ ವಿಲಸಿತಮಂ ಮೇರು ಕಠಿನಭೋಗಾಧಾರಂ
--------------
ಶ್ರೀವಿಜಯ
ಕುಲಜನುಮಲ್ಲಂ ನಣ್ಪಿನ ಬಲಮುಂ ತನಗಿಲ್ಲ ಕಣ್ಗಮೇಳಿದನಾರೊಳ್ ನೆಲಸಿರನೆಲ್ಲಿಯುಮ ವನಂ ಚಲವೆಂದುಂ ಪತ್ತುವಿಡದದೊಂದುಂಟು ಗುಣಂ
--------------
ಶ್ರೀವಿಜಯ
ತಿರಿವುದದೊಂದು ಚಕ್ರದೊಳೆ ನಿಂದು ದಿವಾ ಕರನೆ ಮತ್ತ [ರಿ] ದು ಕಳೆವೊಡಂತದನಾವೆಡೆಯಿಂ ದರಮೆಯಾಗಿ ನೆಲಸಿ ಕೆಲಕಾಲದಿಂ ಪೊರೆದಿರದೞಿದಬೞಿಕತಾ ನೆಲದೊಳ್ (ನುಸುಳು)
--------------
ಶ್ರೀವಿಜಯ
ತಿಳಿಗೊಳಗಳುಮಮಳಾಶಾ ವಳಯಮುಮತಿಧವಳ ಜಳದ ಜಲಧರಪಥಮುಂ ತೊಳಪೆಳವೆಱಿಯುಂ ಕಳೆದುವು ಮುಳಿಸಂ ಕಾಮಿಗಳ ಚಿತ್ತದೊಳ್ ನೆಲಸಿದುದಂ
--------------
ಶ್ರೀವಿಜಯ
ನೆಲಸಿ ಕಿವಿಯೊಳ್ ಮದಾಯತ ವಿಲೋಕದೊಳ್ ಪೊಳೆವುದೊಳ್ಪಿನೆಂದೀ ಕರ್ಣೋ ತ್ಪಲಮುಮನಾಕ್ರಮಿಸುವುದಿಂದು ವಿಲಾಸಿನೀ ನಿನ್ನ ಲೋಲಲೋಚನಯುಗಳಂ
--------------
ಶ್ರೀವಿಜಯ
ನೆಲಸಿದ ಕಾವ್ಯಂ ಕಾವ್ಯ ಕ್ಕೆ ಲಕ್ಷಣಂ ಸತತಮೆಂದೆ ಪೞಗನ್ನಡಮಂ ಪೊಲಗೆಡಿಸಿ ನುಡಿವರಾಗಮ ಬಲಹೀನರ್ ದೇಸಿಯಲ್ಲದೆಂದಱೆದಿರ್ದುಂ
--------------
ಶ್ರೀವಿಜಯ
ಮಲಯಾನಿಲನುಂ ಮಲಯಜ ಜಲಮುಂ ಶಶಿಕಿರಣಮುಂ ವಿಯೋಗಿಗಳೆರ್ದೆಯೊಳ್ ನೆಲಸಿರ್ದುವೞಲೆ ಪಾಪದ ಫಲಮಾದುವು ಯುಕ್ತಕಾರಿ ಕಾಮುಕ ಜನದಾ ಯುಕ್ತಕಾರಿ
--------------
ಶ್ರೀವಿಜಯ