ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಱಿವುಳ್ಳವರೊಳ್ ಬೆರಸದು ದಱಿ೦ದಮಱಿಯದರೊಳಪ್ಪ ಪರಿಚಯದಿಂದಂ ನೆಱಿಯಿಂದ್ರಿಯಮಂ ಗೆಲ್ಲದು ದಱಿ೦ದಮಕ್ಕುಂ ಜನಕ್ಕೆ ಪೀನಂ ಬೆಸನಂ
--------------
ಶ್ರೀವಿಜಯ
ಕಸವರಮೆಂಬುದು ನೆಱಿ ಸೈ ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ ಕಸವೇಂ ಕಸವರಮೇನು ಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ
--------------
ಶ್ರೀವಿಜಯ
ಕಿಱಿದೆಂದೇಳಿಸಿ ಪಗೆಯಂ ಪಱಿಪಡೆ ಕಿಡಿಸದೊಡೆ ಪೆತ್ತು ಕಾಲದ ಬಲಮಂ ನೆಱಿದಿಱಿಗುಂ ನೆರೆದುವಂ ಮಱಸುವವೊಲ್ದಿವಸಕರನನಂಬುದನಿವಹಂ
--------------
ಶ್ರೀವಿಜಯ
ತಱಿಸಂದು ಮನದೊಳೊಂದಂ ಪೆಱತಂ ಮತ್ತದನೆ ಪೋಲ್ವುದಂ ಕುಱಿಪುಗಳಂ ಕುಱಿಮಾಡಿ ಮಾಡಿ ಪೇೞ್ದುದು ನೆಱಿಯೆ ಸಮಾಸೋಕ್ತಿಯೆಂಬುದಿಂತದಱ ತೆಱ೦
--------------
ಶ್ರೀವಿಜಯ
ತ್ಯಾಗಾದಿಗುಣಗಣೋದಯ ಭಾಗಿಯನೇನಾನುಮೊಂದುಪಾಯಾಂತರದಿಂ ನೀಗಲ್ ನೆಱಿಯದೆಯನುಪಮ ನೀ ಗಣಿದದಿನಾನೆ ಮಾಡಿ ನುಡಿದಂ ಬಗೆಯಂ
--------------
ಶ್ರೀವಿಜಯ
ದೀನಾದೀನಾನಾದಿನಾದೀನಾನಿಂನಾನೇನೆನಾನಿನಾ ದೀನಾದಾನಿನಿದಾನಾದೀನಾನೆನಿಂನನನಿಂದನಾ (ಸರ್ವತೋಭದ್ರ) ಪೆಱ(ನಾ) ವಂ ಧರಾಚಕ್ರಕ್ಕೆ ಱಿಯಂ ಕೆಳೆಯಪ್ಪವಂ ನೆಱಿಯಾರೆಣೆಯೆಂಬನ್ನಂ ಕುಱಿ ತಬ್ಧಿಗೆ ಬನ್ನಮಂ (ಗೋಮೂತ್ರಿಕೆ )
--------------
ಶ್ರೀವಿಜಯ