ಒಟ್ಟು 9 ಕಡೆಗಳಲ್ಲಿ , 1 ಕವಿಗಳು , 9 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಱಿಗೊಂಡು ನೆಗೞ್ದನಿಚ್ಛೆಯ ನಱಿಯದೆ ತನ್ನಿಚ್ಛೆಯಿಂದೆ ಕಜ್ಜಂಬೇೞ್ವಂ ತಱಿ ಸಲಿಸಲಾಱನಾರ್ತನ ತೆಱನಱಿಯದೆ ಮರ್ದ್ದುವೇೞ್ವ ಬೆಜ್ಜನ ತೆಱದಿಂ
--------------
ಶ್ರೀವಿಜಯ
ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನೆಗೞ್ದರ್ದ ಕನ್ನಡಂಗಳೊ ಳಗಣಿತ ಗುಣ ವಿದಿತ ಸಂಸ್ಕೃತತೋಕ್ತಕ್ರಮಮಂ ಬಗೆದೊಂದು ಮಾಡಿ ಪೇೞ್ದೊಡೆ ಸೊಗಯಿಸುಗಂ ಕಾವ್ಯಬಂಧಮೆಂದುಮನಿಂದ್ಯಂ
--------------
ಶ್ರೀವಿಜಯ
ನೆನೆನೆನೆದು ಪೆಱರ ಮಾತುಗ ಳನೆ ನೆಗೞ್ದಿರೆ ಕೃತಿಯೊಳಿಡುವವಂ ನಗದ ಗುಹಾ ಧ್ವನಿಯವೊಲನರ್ಥವಚನಂ ತನಗಾಗಿಸಲಱೆ ಯನುಚಿತ ವಾಕ್ಚತುರತೆಯಂ
--------------
ಶ್ರೀವಿಜಯ
ಬಗೆದು ಮಾರ್ಗದ್ವಿತಯಗತಿಗಳಂ ಪ್ರಗುಣಗುಣಗಣೋದಯರ್ಕಳ್ ವಿತರ್ಕದಿಂ ಸೊಗಯಿಸುವಂತು ವಚನರಚನೆಯಿಂ ನೆಗೞ್ದಿರೆ ಬೆರಸಿ ಪೇೞ್ಗಿ ರಸವಿಶೇಷದೊಳ್ (ವೃತ್ತ)
--------------
ಶ್ರೀವಿಜಯ
ಮಾತುಗಳಾವುವಾನುಮುಪವರ್ಣಿತ ಮಾರ್ಗಯುತಪ್ರಯೋಗ ಸಂ ಜಾತವಿಭಾಗದಿಂ ನೆಗೞ್ದ ಕನ್ನಡದೊಳ್ ಗುಣಮಂ ತಗುಳ್ಚುಗುಂ ನೀತಿನಿರಂತರಾನುಗತ ವೃತ್ತಿ ವಿಕಲ್ಪಿತಮಂ ತದೀಯ ನಿ ರ್ಣೀತಿಯನೀತೆಱತ್ತು ತಱೆಸಲ್ಗೆ ಬುಧೋತ್ತಮರುಕ್ತಿಪೂರ್ವಕಂ
--------------
ಶ್ರೀವಿಜಯ
ಮಿಗೆ ನಿಬಿಡಬಂಧಮೆಂಬುದು ತಗುಳ್ವುವು ವರ್ಣಂಗಳಗಲದಿರೆ ಮತ್ತಕ್ಕುಂ ನೆಗೞ್ದಲ್ಪಪ್ರಾಣಾಕ್ಷರ ನಿಗದಿತಮೇತದ್ವಿಪರ್ಯಯೋಕ್ತಂ ಶಿಥಿಲಂ
--------------
ಶ್ರೀವಿಜಯ
ಮೃಗಪಶುಶಕುನಿ ಗಣಂಗಳೊ ಳಗಣಿತ ನಿಜಜಾತಿಜನಿತ ಭಾಷೆಗಳೆಂದುಂ ನೆಗೞ್ದಂತಿರೆ ನರರೊಳಮ ಪ್ರಗಲ್ಭವಚನಪ್ರವೃತ್ತಿ ನೆಗೞ್ಗುಂ ಸಹಜಂ
--------------
ಶ್ರೀವಿಜಯ
ಸದಮಳ ಸಮಸಂಸ್ಕೃತ ಕಾ ವ್ಯದ ಹೃದಯಂ ಹರ್ಷಚರಿತ ಕಾದಂಬರಿಗಳ್ ಮೊದಲಾಗಿ ನೆಗೞ್ದವಿದೞೊಳ್ ಸದಳಂಕಾರಂಗಳಖಿಳ ಕವಿವಿಧಿತಂಗಳ್
--------------
ಶ್ರೀವಿಜಯ