ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರುಪಮ ಗಂಧರ್ವಗತಿ ಸ್ವರಾದಿಕ ಕಳಾಗುಣಂ ಚತುಃಷಷ್ಟಿವಿಧಂ ದೊರೆಕೊಳ್ಳದುದೆಲ್ಲ ಕಳಾ ವಿರುದ್ಧದೋಷಂ ವಿಶಿಷ್ಟಜನತಾದೂಷ್ಯಂ
--------------
ಶ್ರೀವಿಜಯ
ಪರಿವೃತ್ತಿಯೆಂಬುದಕ್ಕುಂ ನಿರುಪಮಮರ್ಥಸ್ವರೂಪ ವಿನಿಮಯ ವಚನಂ ಪರಮಗುಣೋದಯಮದಱಾ ಸ್ವರೂಪಮಂ ಬಗೆದುಕೊಳ್ಗೆ ಮತ್ತೀ ತೆಱದಿಂ
--------------
ಶ್ರೀವಿಜಯ
ಸರಸೀಜಂ ಸರಜಂ ಶಶ ಧರ ಬಿಂಬಮದತಿ ಕಳಂಕಿತಂ ನಿನ್ನ ಮೊಗಂ ನಿರುಪಮಮಾಗಿಯುಮವಱೊಳ್ ದೊರೆಯೆಂಬುದನಱಿದುಕೊಳ್ಗೆ ನಿಂದೋಪಮೆಯಂ ನಿಂದೋಪಮೆ
--------------
ಶ್ರೀವಿಜಯ
ಹರಿಣಧರ ಸರಸಿಜಂಗಳ್ ದೊರೆಯಲ್ಲಿವು ತನಗೆ ತಾನೆ ದೊರೆ ನಿನ್ನ ಮೊಗಂ ನಿರುಪಮಮೆಂಬುದನಱಿವುದು ನಿರುತಮಸಾಧಾರಣೋಪಮೋದಯ ವಿಧಿಯಂ ಅಸಾಧಾರಣೋಪಮೆ
--------------
ಶ್ರೀವಿಜಯ