ಒಟ್ಟು 11 ಕಡೆಗಳಲ್ಲಿ , 1 ಕವಿಗಳು , 10 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಲನಸಾಧ್ಯಾಕಳಂಕ ಮನನಿಳತಪನೀಯ ಧೂಳಿಯಾನಜಲಕ್ಷಾ ಲನಮನನಾಕಲಶೋಷ್ಯಮ ನನಿಯತಕರ್ದಮಮನಯಶಮಂ ತೊಱಿಗಱಿವಂ
--------------
ಶ್ರೀವಿಜಯ
ಇದು ನಿಬಿಡ ಶಿಥಿಲಬಂಧಾ ಸ್ಪದ ಮಾರ್ಗದ್ವಿತಯಗದಿತ ಲಕ್ಷ್ಯವಿಭಾಗಂ ಸದಭಿಕಮನೀಯಗುಣಮ ಪ್ಪುದು ನಿಯತಂ ಕಾಂತಮೆಂಬುದಭಿಗೀತಾರ್ಥಂ
--------------
ಶ್ರೀವಿಜಯ
ಕಮಳಂ ಲಲಿತಭ್ರೂವಿ ಭ್ರಮಮಂ ವಿಸ್ಮಿತವಿಲೋಲಲೋಚನಯುಗಮಂ ಸಮವಾಯಮಳ್ಳೊಡದು ನಿ ನ್ನ ಮೊಗಕ್ಕೆಣೆಯೆಂಬುದದ್ಭುತೋಪಮೆ ನಿಯತಂ ಅದ್ಭುತೋಪಮೆ
--------------
ಶ್ರೀವಿಜಯ
ಘನಮೆರಡನೆಯದಱೊಳಮಾ ಱನೆಯ ವಿಭಕ್ತಿಯೊಳಮೊಳವು ಗುರುಲಘುಭೇದಂ ಅನಿಯತ ವೃತ್ತಿಯನಱಿದಿದ ನನುಮಾರ್ಗಕ್ರಮದೆ ಸಯ್ತು ಮಾಡುಗೆ ನಿಪುಣಂ
--------------
ಶ್ರೀವಿಜಯ
ನಯವಿದುದಿತಯುಕ್ತಿವ್ಯಕ್ತಿಲೋಕ ಪ್ರತೀತ್ಯಾ ಶ್ರಯ ಸಕಳಕಳಾಲೀಲಾಕರಾಲ್ಪೋ ಪಜಲ್ಪಂ ನಿಯತಸಮಯ ಸಾರಾಸಾಧನೀಯಾದಿಕಾರಾ ನ್ವಯಪರಮ ತಪೋನುಷ್ಠಾನನಿಷ್ಠಾರ್ಥಸಿದ್ಧಂ
--------------
ಶ್ರೀವಿಜಯ
ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನಿಯತೋದ್ದೇಶಿಯುಮನುದೇ ಶಿಯುಮನನುವಿನಂತು ಪೇೞಿ ಯಾಥಾಸಂಖ್ಯಾ ಹ್ವಯಮಕ್ಕುಮಾಗಮೋಕ್ತ್ಯಾ ಶ್ರಯದಿಂ ವ್ಯತಿರೇಕಮಕ್ಕುಮಲ್ಲದುವೆಲ್ಲಂ
--------------
ಶ್ರೀವಿಜಯ
ನೆರೆದ ವಿಸಂವಾದಂ ಪಂ ಜರಶುಕತತಿಯೊಲ್ ಕುಲಾಲಗೇಹಂಗಳೊಳಂ ಪರಚಕ್ರಭ್ರಾಂತಿಗಳ ಧ್ವರದೊಳೆ ನೆಗೞ್ಗುಂ ಮಹಾಹವಧ್ವನಿನಿಯತಂ
--------------
ಶ್ರೀವಿಜಯ
ಪರಮೋದಯರಿರ್ ಕಮಲಾ ಕರಬೋಧಕರಿರ್ ದಿನೇಶನುಂ ನೀನುಂ ಭಾ ಸ್ಕರನನಿಯತ ವೃತ್ತಕ್ರಮ ನರಸಾ ನಿನ್ನಂತೆ ನಿಯತವೃತ್ತಸ್ಥಿತ ನೇಂ ಉಭಯ ವ್ಯತಿರೇಕಂ
--------------
ಶ್ರೀವಿಜಯ
ಸತತೋದಯನಪ್ರತಿಹತ ಗತಿತೀವ್ರಂ ತದ್ದಿನಾಧಿನಾಥನುಮಸ್ತಂ ಗತನಾದನಂತೆ ನಿಯತ ಪ್ರತೀತಿಯಂ ಕಳೆಯಲಕ್ಕುಮೇ ವ್ಯಾಪಕಮಂ ಸಕಲವ್ಯಾಪಿ
--------------
ಶ್ರೀವಿಜಯ