ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನಿಗದಿತ ಯಾಥಾಸಂಖ್ಯಾ ನುಗತವ್ಯತಿರೇಕಯುಗಳ ಲಕ್ಷ್ಯಮಿವಕ್ಕುಂ ಬಗೆಗಾ ದೀಪಕದ ವಿಭಾ ಗ ಗತಿಯನೀ ಭೇದಲಕ್ಷ್ಯಲಕ್ಷಣಯುಗದಿಂ
--------------
ಶ್ರೀವಿಜಯ
ಮಿಗೆ ನಿಬಿಡಬಂಧಮೆಂಬುದು ತಗುಳ್ವುವು ವರ್ಣಂಗಳಗಲದಿರೆ ಮತ್ತಕ್ಕುಂ ನೆಗೞ್ದಲ್ಪಪ್ರಾಣಾಕ್ಷರ ನಿಗದಿತಮೇತದ್ವಿಪರ್ಯಯೋಕ್ತಂ ಶಿಥಿಲಂ
--------------
ಶ್ರೀವಿಜಯ
ವಿಗತಮಳಮುಪಾತ್ತಾರಾತಿಸಾರ್ಥಾರ್ಥವೀರಂ ಸ್ಥಗಿತಮಮಿತ ನಾನಾ ಶಬ್ದವೀಚಿ ಪ್ರಪಂಚಂ ನಿಗದಿತಗುಣರತ್ನೈಕಾಕರಂ ಸಾಗರಂಬೋಲ್ ಸೊಗಯಿಸಿ ಧರಣೀ ಚಕ್ರಾಂಬ ರಾಕ್ರಾಂತಮಕ್ಕುಂ
--------------
ಶ್ರೀವಿಜಯ
ಸಮಸಂಸ್ಕೃತಂಗಳೊಳ್ ಸ ಯ್ತಮರ್ದಿರೆ ಕನ್ನಡಮನಱೆದು ಪೇೞ್ಗೆಂಬುದಿದಾ ಗಮಕೋವಿದ ನಿಗದಿತ ಮಾ ರ್ಗಮಿದಂ ಬೆರಸಲ್ಕಮಾಗದೀ ಸಕ್ಕದದೊಳ್
--------------
ಶ್ರೀವಿಜಯ