ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಗೀತಿಕೆ) ಅನುಗತಂ ಪೂರ್ವಕವಿಗಳ್ ನೆಎನದಿನ್ನುಂ ಪೇೞ್ದಿಂ ದುಷ್ಕರೋಕ್ತಿಯ – ನ್ನನುಗತಕ್ರಮದೆ ಬಗೆದು ಹೇಳಿಕೆಯೊಳ್ ಜನಿತವಿಭೇದಮುಮಂ ಪೇೞ್ವೆಂ ಕಿಱೆದಂ
--------------
ಶ್ರೀವಿಜಯ
[ಗೋಮೂತ್ರಿಕಂ] ಸಯಮಕಂ ಪ್ರೇಮದಿಂ ಗೋಪಿತಕ್ರಿಯಂ ಶ್ರೀಮದರ್ಧಭ್ರಮಂ ಚಕ್ರನಾಮಂ ಮುರಜಬಂಧಕಂ ಇವು ದುಷ್ಕರ ಕಾವ್ಯಂಗಳ್ ಸವಿಶೇಷವರ್ತಿಗಳ್ ಸುವಿಚಾರಿತಮೀ ತೋರ್ಪೆ [ನಿ] ವಱ ಲಕ್ಷ್ಯಭೇದಮಂ
--------------
ಶ್ರೀವಿಜಯ
ಪದಪಾದ ಸಮಸ್ತಾರ್ಧ [ಗತ] ಭೇದ ಚತುಷ್ಟಯಂ ವಿದಿತಾಳಂಕ್ರಿಯಾಧಾರಂ ಮೊದಲ್ ಪೇ[ೞ್ವೊಡೆ] ದುಷ್ಕರಂ ಮುನ್ನಂ ತನ್ನಂ ತಾನೆ ತಾನೇಕೆನ್ನಂ ಕೆನ್ನಂ ನಿರಂತರಂ ಭಿನ್ನಂ ಬಂದಿಪ್ಪನಂತಿನ್ನುಂ ತನ್ನಿಂ ತನಗಮೇವಳೊ
--------------
ಶ್ರೀವಿಜಯ
ಮಿಗೆ ದುಷ್ಕರ ಕಾವ್ಯಂಗಳೊ ಳಗರ್ಹಿತಪ್ರಾಯಮಕ್ಕುಮಾಶ್ರುತಿಕಷ್ಟಂ ಪಗರಣದೊಳುಱಿದ ಮೂಱು೦ ನಗಿಸುಗುಮಪ್ಪುದಱಿನಲ್ಲಿಗಂತವದೋಷಂ
--------------
ಶ್ರೀವಿಜಯ