ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 8 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂತುಂ ಭೇದಮನಿನಿಸಾ ರ್ಪಂತುತ್ತರ ದಕ್ಷಿಣೋರು ಮಾರ್ಗದ್ವಯದಾ ಚಿಂತಿತ ಪುರಾಣ ಕವಿ ವಿದಿ ತ್ನಾಂತರಮಂ ಪೇೞ್ವಿನಱಿವಮಾಳ್ಕೆಯೊಳೆನ್ನಾ
ಇಂತಿದು ದಕ್ಷಿಣ ಮಾರ್ಗದ ಕಾಂತಮಸಂಭಾವಿತಾರ್ಥಮುದ್ದಾಮೋಕ್ತಂ ಸಂತತಮುತ್ತರ ಮಾರ್ಗಗ ತಾಂತರಮದನಿಂತು ಕುಱುತು ತಱೆಸಲ್ಗೆ ಬುಧರ್
ಇದು ದಕ್ಷಿಣಮಾರ್ಗವಿಭೇ ದದ ಮಧುರರಸಪ್ರಯೋಗಮಾಚಾರ್ಯಮನೋ ಮುದಿತವಿತಾನಂ ವಿದಿತಾ ಸ್ವದಮುತ್ತರಮಾರ್ಗವರ್ಗಮಧುರಾಳಾಪಂ
ತ್ರಿದಶಗಣೇಶಮೌಳಿಮಣಿಪೀಠನಿಷೇವಿಗಳೊಳ್ ಮುನೀಂದ್ರನಾ ಪದಯುಗಳಂಗಳೊಳ್ ಮುದವೆ ಬಾಗುವೆನೆಂಬುದು ದಕ್ಷಿಣಾಯನಂ ವಿದಿತಸುರಾಧಿರಾಜಮಕುಟಾಗ್ರ ಸಮರ್ಪಿತದೊಳ್ ಮುನೀಂದ್ರನಾ ಪದಯುಗದೊಳ್ ಮನೋಮುದದೆ ಬಾಗುವೆನೆಂಬುದಿದುತ್ತರಾಯಣಂ
ನೋಡುವೆನಾ ಮಹೀಪತಿಯ ನರ್ಥಿಗಣಾರ್ಥಿತ ಕಲ್ಪವೃಕ್ಷನಂ ಬೇಡುವೆನರ್ಥ ಸಂಚಯಮನೆಂಬುದಿದುತ್ತರ ಮಾರ್ಗವಾಚಕಂ ನೀಡುಮುದಾತ್ತಚಾರುಗುಣನಂ ಮನದೊಳ್ ನೆಱೆನೋೞ್ಪಿನೞ್ತಿಯೊಳ್ ಕೂಡಿರವೇೞ್ಪುನೆಂಬುದಿದು ದಕ್ಷಿಣಮಾರ್ಗವಿಚಕ್ಷಣೋದಿತಂ
ಬರಿಸುವೆನಿಂದು ನಂದನವನಾಂತರದಲ್ಲಿಗೆ ಕಾಂತನಂ ಸಮಂ ತಿರಿಸುವೆನಂತನಂ [ಗ] ಸುಖಸಂಗತ ಮಂಗಳಕಾರಣಂಗಳಂ ತರಿಸುವೆನಾಂ ಮನೋನಯನವಲ್ಲಭನೊಳ್ ಮನದೊಂದಲಂಪಿನಿಂ ನೆರೆವೆನಮೋಘಮೆಂಬುದಿದು ದಕ್ಷಿಣಮಾರ್ಗವಿಶೇಷಭಾಷಿತಂ
ಸತತಂ ದಕ್ಷಿಣ ಮಾರ್ಗೋ ದಿತೋಕ್ತಿಭೇದಕ ಗುಣಂ ಸ್ವಭಾವಾಖ್ಯಾನಂ ವಿ [ತ] ತೊತ್ತರ ಮಾರ್ಗಗತಂ ಪ್ರತೀತ ವಕ್ರೋಕ್ತಿಕೃತಮನಲ್ಪವಿಕಲ್ಪಂ
ಸಮ ಮಧುರ ನಿಬಿಡ ಕಾಂತ ಸು ಕುಮಾರ ಸುಸಮಾಹಿತ ಪ್ರಸನ್ನೋದಾರ ಪ್ರಮಿತ ಗ್ರಾಮ್ಯೋಜಸ್ವಿ ಕ್ರಮದಿಂ ದಶಭೇದಮಲ್ಲಿ ದಕ್ಷಿಣ ಮಾರ್ಗಂ