ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತು ಬಿೞ್ದ ತೆಱದಿಂ ವರಗೀತಗುಣೋದಯೈ ಕಾಂತ ಕಾಂತ ವಿಷಯಾಶಯರಾಗಿ ನಿರಾಕುಳಂ ಸಂತತಂ ನುಡಿಗಳೊಲ್ ಬಗೆ ಪೆರ್ಚಿರೆ ಪೇೞ್ದವರ್ ಸಂತಸಂಬಡಿಸುವರ್ ನೃಪತುಂಗಸಭಾ ಸದರ್
--------------
ಶ್ರೀವಿಜಯ
ಕಾರಕದೋಷಮುಂ ವಚನದೋಷಮುಮಾ ಗುರುದೋಷಮುಂ ಲಘೂ ಚ್ಚಾರಿತ ಶಬ್ದದೋಷಮುಮದಂತೆ ಸಮುಚ್ಚಯಜಾತದೋಷಮುಂ ಭೂರಿ ವಿಕಲ್ಪದೋಷಮುಮದಿನ್ನವಧಾರಣದೋಷಮುಂ ವಿಶಂ ಕಾ ರಚಿತೋರು ದೋಷಮುಮನೀ ತೆಱದಿಂ ತೞಿಸಲ್ಗೆ ಪಂಡಿತರ್
--------------
ಶ್ರೀವಿಜಯ
ಕುಱಿಗೊಂಡು ನೆಗೞ್ದನಿಚ್ಛೆಯ ನಱಿಯದೆ ತನ್ನಿಚ್ಛೆಯಿಂದೆ ಕಜ್ಜಂಬೇೞ್ವಂ ತಱಿ ಸಲಿಸಲಾಱನಾರ್ತನ ತೆಱನಱಿಯದೆ ಮರ್ದ್ದುವೇೞ್ವ ಬೆಜ್ಜನ ತೆಱದಿಂ
--------------
ಶ್ರೀವಿಜಯ
ತಱಿಸಂದು ಪಲವು ತೆಱದಿಂ ತೆಱಿದಿರೆ ನಿಗೞ್ದುರ್ದುದೊಂದು ವಸ್ತುಸ್ಥಿತಿಯಂ ಮಱಸಿ ಪೆಱತೊಂದು ಮಾಳ್ಕೆಯಿ ನಱಿಪುವುದುತ್ಪ್ರೇಕ್ಷೆಯೆಂಬುದಿಂತದಱ ತೆಱ೦
--------------
ಶ್ರೀವಿಜಯ
ಪರಿವೃತ್ತಿಯೆಂಬುದಕ್ಕುಂ ನಿರುಪಮಮರ್ಥಸ್ವರೂಪ ವಿನಿಮಯ ವಚನಂ ಪರಮಗುಣೋದಯಮದಱಾ ಸ್ವರೂಪಮಂ ಬಗೆದುಕೊಳ್ಗೆ ಮತ್ತೀ ತೆಱದಿಂ
--------------
ಶ್ರೀವಿಜಯ
ಮುನಿ ವೀತರಾಗನೆಂದುಂ ಬನಮಂ ಸಾರ್ತಕ್ಕುಮಾವ ತೆಱದಿಂ ಪೋಪಂ ಮನಮಂಜುಗುಮಱೆ ಯದವಂ ಮುನಿಗುಂ ಪಗೆವಂಗೆ ಪಾಪಕರ್ಮಂ ಪೊಲ್ಲಂ
--------------
ಶ್ರೀವಿಜಯ
ವರರೂಪಕಾದ್ಯಳಂಕಾ ರರಚನೆಯೊಳ್ ಮುನ್ನೆ ಪೇೞ್ದು ಬಂದೆಂ ಕೆಲವಂ ದೊರೆಕೊಳೆ ಬಗೆಗೀ ತೆಱದಿಂ ನಿರಂತರವಿರುದ್ಧನಿಯಮಿತ ಶ್ಲೇಷಗಳಂ
--------------
ಶ್ರೀವಿಜಯ