ಒಟ್ಟು 12 ಕಡೆಗಳಲ್ಲಿ , 1 ಕವಿಗಳು , 8 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಾ ಜಾನಕಿಯಂ ಪೋಗಿ ತಾರಾ ತರಳನೇತ್ರೆಯಂ ತಾರಾಧಿಪತಿತೇಜಸ್ವಿ ತಾರಾದಿವಿಜಯೋದಯಾ ಕೞಿ ಪಂ ತಮದು ನಿಂಕಮಿಂ ಕೞಿ ಪಂ ಕಳಿವಂ ಚಲ ಕ ೞಿ ಪಂ ಕಂಜನೇತ್ರ .. ಕೞಿ ಪಂ ಬೞಿ ಕಾತನಂ
--------------
ಶ್ರೀವಿಜಯ
ತಾರಾಪತಿವತ್ಕೀರ್ತಿವಿಹಾರಾ ಹಾರಾಪ್ರಭಯಾ ನಿಜತನುಪೂರಾ ಪೂರಾಶ್ರಿತ ಹೃತ್ಕ್ಲೇಶ ವಿದೂರಾ ದೂ ರಾವ್ಯ ತಬಲವಿಸ್ತಾರಾ
--------------
ಶ್ರೀವಿಜಯ
ದಾರುದಾರುಣನಂ ದಾನವಾರಿವಾರಿತಲೋಕನಂ ಬಾರ ಬಾ ರಣಮಂ ನೋಡಾ ಸಾರಸಾರಾಂಬುದಾಭಮಂ ಸಾರಾಸಾರಸನಾದಾಮಸಾರಸಾರಾ ನಿತಂಬೆಯಂ ತಾರಾತಾರಾತರಂಗಾಭಾಕಾರತಾ ರಮಣೀಯೆಯಂ
--------------
ಶ್ರೀವಿಜಯ
ದಿವಸಕರನುದಯಗಿರಿಶಿಖ ರವಿಶೇಷ ವಿಭೂಷಣಂ ತಮೋರಿಪುಬಳಮಂ ಪ್ರವಿಲೀನಂ ಮಾಡಿದನವ ಯವದೊಳ್ ತಾರಾವಿತಾನತೇಜಮನೞಿದಂ ದ್ರವ್ಯಾನುಗತ ಆದಿದೀಪಕಂ
--------------
ಶ್ರೀವಿಜಯ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂ ಜನಿತಮುದಂ
--------------
ಶ್ರೀವಿಜಯ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂದುರುಮುದದಿಂ
--------------
ಶ್ರೀವಿಜಯ
ಪ್ರತಿವಸ್ತೂಪಮಿತಾಲಂ ಕೃತಮಿಂತಕ್ಕುಂ ಧರಾಧಿಪಾ ನಿನ್ನನ್ನಂ ವಿತತಯಶನಿಲಯ ತಾರಾ ಪತಿ ದಿನಕರ ಸದೃಶತೇಜನೆಂಬುದುಮುಂಟೇ ಪ್ರತಿವಸ್ತೂಪಮೆ
--------------
ಶ್ರೀವಿಜಯ
ವಿಗತಮಳಮುಪಾತ್ತಾರಾತಿಸಾರ್ಥಾರ್ಥವೀರಂ ಸ್ಥಗಿತಮಮಿತ ನಾನಾ ಶಬ್ದವೀಚಿ ಪ್ರಪಂಚಂ ನಿಗದಿತಗುಣರತ್ನೈಕಾಕರಂ ಸಾಗರಂಬೋಲ್ ಸೊಗಯಿಸಿ ಧರಣೀ ಚಕ್ರಾಂಬ ರಾಕ್ರಾಂತಮಕ್ಕುಂ
--------------
ಶ್ರೀವಿಜಯ